ನಾಳೆಯಿಂದ 4 ದಿನ ಪಾಸ್​ಪೋರ್ಟ್ ಸೇವಾ ಪೋರ್ಟಲ್ ಬಂದ್

Prasthutha|

- Advertisement -

ಬೆಂಗಳೂರು: ಪಾಸ್​ಪೋರ್ಟ್ ಸಂಬಂಧ ಪಟ್ಟ ಕೆಲಸಗಳಿಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ.

ಆಗಸ್ಟ್ 29, ಗುರುವಾರ ಸಂಜೆ 8 ಗಂಟೆಯಿಂದ ಸೆಪ್ಟಂಬರ್ 2, ಬೆಳಗ್ಗೆ 6 ಗಂಟೆಯವರೆಗೂ ಪಾಸ್​ಪೋರ್ಟ್ ಸೇವಾ ಪೋರ್ಟಲ್ ಬಂದ್ ಆಗಿರುತ್ತದೆ.

- Advertisement -

ಟೆಕ್ನಿಕಲ್ ಮೈಂಟೆನೆನ್ಸ್ ಕಾರಣಕ್ಕೆ ಪೋರ್ಟಲ್ ಸುಮಾರು ನಾಲ್ಕು ದಿನ ಸಾರ್ವಜನಿಕರಿಗೆ ಅಲಭ್ಯ ಇರುತ್ತದೆ ಎಂದು ಪಾಸ್​ಪೋರ್ಟ್ ಇಲಾಖೆ ತಿಳಿಸಿದೆ.

ಪೋರ್ಟಲ್​ನ ಟೆಕ್ನಿಕಲ್ ಮೈಂಟೆನೆನ್ಸ್ ಕಾರ್ಯ ನಡೆಯುತ್ತಿರುವುದರಿಂದ ಅದು ಸಾರ್ವಜನಿಕ ಬಳಕೆಗೆ ಲಭ್ಯ ಇರುವುದಿಲ್ಲ. ನಾಳೆ ಗುರುವಾರ(ಆಗಸ್ಟ್ 29) ಸಂಜೆ 8ರಿಂದ ಸೆಪ್ಟಂಬರ್ 2ರ ಬೆಳಗ್ಗೆ 6ಗಂಟೆಯವರೆಗೂ ಈ ಪೋರ್ಟಲ್​ನಲ್ಲಿ ಯಾವ ಸರ್ವಿಸ್ ಇರುವುದಿಲ್ಲ.

ಸದ್ಯ ಆಗಸ್ಟ್ 30ರಂದು ನೀಡಲಾಗಿರುವ ಎಲ್ಲಾ ಅಪಾಯಿಂಟ್ಮೆಂಟ್​ಗಳನ್ನು ರದ್ದು ಮಾಡಲಾಗಿದ್ದು, ಅಪಾಯಿಂಟ್ಮೆಂಟ್ ಪಡೆದಿರುವ ಅಭ್ಯರ್ಥಿಗಳಿಗೆ ಎಸ್ಸೆಮ್ಮೆಸ್ ಮೂಲಕ ಮುಂದಿನ ಮಾಹಿತಿ ನೀಡಲಾಗುತ್ತದೆ ಎಂದು ಪಾಸ್​ಪೋರ್ಟ್ ಇಲಾಖೆ ಹೇಳಿದೆ.



Join Whatsapp