ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಕಂಪಿಸಿದ ಭೂಮಿ: 4.5 ತೀವ್ರತೆಯ ಭೂಕಂಪ

Prasthutha|

ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಇಂದು ಬೆಳಗ್ಗೆ ಭೂಕಂಪದ ಅನುಭವವಾಗಿದೆ. ಇದರ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.5 ಎಂದು ಅಳೆಯಲಾಗಿದೆ.

- Advertisement -


ಬೆಳಗ್ಗೆ 7.14ಕ್ಕೆ ಈ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಈ ಮಾಹಿತಿಯನ್ನು ನೀಡಿದೆ.


ಪರ್ಭಾನಿ ಮತ್ತು ನಾಂದೇಡ್ ನಲ್ಲಿಯೂ ಭೂಕಂಪನದ ಅನುಭವವಾಗಿದೆ. ಯಾವುದೇ ಪ್ರಾಣ ಅಥವಾ ಆಸ್ತಿ ನಷ್ಟದ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಈ ಹಿಂದೆ ಮಾರ್ಚ್ 21 ರಂದು ಕೂಡ ಹಿಂಗೋಲಿಯಲ್ಲಿ ಭೂಕಂಪ ಸಂಭವಿಸಿತ್ತು .



Join Whatsapp