4 ತಿಂಗಳಿನಿಂದ ಗ್ಯಾಸ್ ಸಬ್ಸಿಡಿ ಪಾವತಿಯಾಗಿಲ್ಲ | ಗ್ರಾಹಕರ ಆಕ್ರೋಶ

Prasthutha|

ಉಡುಪಿ : ಗ್ಯಾಸ್ ಸಿಲಿಂಡ್ ಬೆಲೆ ಅತ್ಯಂತ ಕಡಿಮೆ ಮಾಡುತ್ತೇವೆ ಎಂಬ ಭರವಸೆಯೊಂದಿಗೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು. ಆದರೆ, ಅಧಿಕಾರಕ್ಕೆ ಬಂದ ನಂತರ ಗ್ಯಾಸ್ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಹೋಯಿತು. ಅಷ್ಟು ಮಾತ್ರವಲ್ಲದೆ, ಸಬ್ಸಿಡಿ ಮೊತ್ತವನ್ನು ನೇರ ಖಾತೆಗೆ ಜಮಾಯಿಸುವುದಾಗಿ ಹೇಳಿದ್ದ ಸರಕಾರ, ಈಗ ನಾಲ್ಕು ತಿಂಗಳಿನಿಂದ ನಯಾ ಪೈಸೆ ಸಬ್ಸಿಡಿ ಮೊತ್ತ ಜಮಾಯಿಸಿಲ್ಲ ಎಂದು ವರದಿಯೊಂದು ತಿಳಿಸಿದೆ.

- Advertisement -

ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಕಳೆದ ಮೇ ತಿಂಗಳಿನಿಂದ ಯಾರೊಬ್ಬರಿಗೂ ಪಾವತಿಯಾಗಿಲ್ಲ. ಕಳೆದೆರಡು ವರ್ಷಗಳಲ್ಲಿ ಕೇಂದ್ರ ಸರಕಾರ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹೊರತಾದ ರೂ.450 ದರವನ್ನು ಪ್ರತಿ ತಿಂಗಳೂ ರೂ.5, 10ರಂತೆ ಏರಿಸಿ, ಈಗ ರೂ.582ರಿಂದ 602 ನಡುವೆ ನಿಗದಿಪಡಿಸಿದೆ. ಹೀಗಾಗಿ ಗ್ಯಾಸ್ ಸಿಲಿಂಡರ್ ದರ ಏರಿದರೆ ಸಿಗುತ್ತಿದ್ದ ಸಬ್ಸಿಡಿ ರೂ.150 ಖೋತಾ ಆಗಿದೆ.

ಕಳೆದ ಮಾರ್ಚ್ ನಲ್ಲಿ ಗ್ಯಾಸ್ ಸಿಲಿಂಡರ್ ದರ ರೂ. 798 ಆಗಿದ್ದರೆ, ರೂ.216.71 ಸಬ್ಸಿಡಿ ಬ್ಯಾಂಕ್ ಖಾತೆಗೆ ಜಮೆಯಾಗಿತ್ತು. ಏಪ್ರಿಲ್ ನಲ್ಲಿ ರೂ.734.30 ದರಕ್ಕೆ ರೂ.146.24 ಸಬ್ಸಿಡಿ ದೊರಕಿತ್ತು. ಆದರೆ, ಆ ನಂತರದ ತಿಂಗಳಿನಿಂದ ನಯಾ ಪೈಸೆ ಸಬ್ಸಿಡಿ ಬ್ಯಾಂಕ್ ಖಾತೆಗೆ ಬಿದ್ದಿಲ್ಲ ಎನ್ನಲಾಗಿದೆ.

- Advertisement -

ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ದೂರುಗಳನ್ನು ನೀಡುತ್ತಿದ್ದಾರೆ.

Join Whatsapp