ಚೆನ್ನೈ: ಭಾರತ ತಂಡ ಮಹಿಳೆಯರ ಟಿ20 ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಎದುರು 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಪೂಜಾ ವಸ್ತ್ರಾಕರ್ (14ಕ್ಕೆ 3) ಬಿಗಿ ಬೌಲಿಂಗ್ ಹಾಗೂ ಆರಂಭಿಕ ಬ್ಯಾಟರ್ ಸ್ಮತಿ ಮಂದನಾ (54* ರನ್, 40 ಎಸೆತ, 8 ಬೌಂಡರಿ, 2 ಸಿಕ್ಸರ್) ಅರ್ಧಶತಕದ ನೆರವಿನಿಂದ ಭಾರತ ಈ ಗೆಲುವು ತನ್ನದಾಗಿಸಿದೆ.
ಇದಕ್ಕೂ ಮುನ್ನ ಏಕದಿನ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಮಾಡಿದ್ದ ಭಾರತ ಏಕೈಕ ಟೆಸ್ಟ್ ಪಂದ್ಯವನ್ನೂ ಜಯಿಸಿತ್ತು.
ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ದ.ಆಫ್ರಿಕಾ, ಪೂಜಾ ಹಾಗೂ ರಾಧಾ ಯಾದವ್ (6ಕ್ಕೆ 3) ದಾಳಿಗೆ ತತ್ತರಿಸಿ 17.1 ಓವರ್‌ಗಳಲ್ಲಿ 84 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಭಾರತ, ಸ್ಮತಿ ಹಾಗೂ ಶೆಫಾಲಿ ವರ್ಮ (27* ರನ್, 25 ಎಸೆತ, 3 ಬೌಂಡರಿ) ಅಜೇಯ ಜತೆಯಾಟದ ನೆರವಿನಿಂದ 10.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 88 ರನ್‌ಗಳಿಸಿ ಗೆಲುವು ಕಂಡಿತು. ಮೊದಲ ಪಂದ್ಯದಲ್ಲಿ ದ.ಆಫ್ರಿಕಾ 12 ರನ್ ಗೆಲುವು ದಾಖಲಿಸಿದರೆ, 2ನೇ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.
ದಕ್ಷಿಣ ಆಫ್ರಿಕಾ: 17.1 ಓವರ್‌ಗಳಲ್ಲಿ 84 (ವೋಲ್ವಾರ್ಡ್ 9, ತಂಜಿಮ್ 20, ಮಾರಿಜಾನ್ನೆ 10,ಅನ್ನೆಕೆ 17, ಟ್ರಯೋನ್ 9, ಸಿನಾಲೊ 8, ಪೂಜಾ 13ಕ್ಕೆ 4, ರಾಧಾ 6ಕ್ಕೆ 3, ಶ್ರೇಯಾಂಕಾ 19ಕ್ಕೆ 1). ಭಾರತ: 10.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 88. ಶೆಫಾಲಿ 27* ಹಾಗೂ ಸ್ಮತಿ 54* ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪಡೆದರು.
ಪೂಜಾ ಪೂಜಾ ವಸ್ತ್ರಾಕರ್ 2. ಪೂಜಾ ವಸಕರ್ ಟಿ20ನಲ್ಲಿ 50 ವಿಕೆಟ್ ಪಡೆದ 2ನೇ ಭಾರತೀಯ ಬೌಲರ್. ಜೂಲನ್ ಗೋಸ್ವಾಮಿ ಮೊದಲಿಗರು.