ನವದೆಹಲಿ: ಉದ್ಯಮಿ ಹಾಗೂ ಕಾಂಗ್ರೆಸ್ ಸಂಸದ ಧೀರಜ್ ಸಾಹುಗೆ ಸೇರಿದ 353 ಕೋಟಿ ರೂ.ಗಳನ್ನುಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದ್ದು, ಈ ಕುರಿತು ಸಾಹು ಮಾತನಾಡಿದ್ದಾರೆ. ಆ ಹಣಕ್ಕೂ ಕಾಂಗ್ರೆಸ್ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಧೀರಜ್, ಇಂದು ಏನಾಗುತ್ತಿದೆಯೋ ಅದು ನನಗೆ ದುಃಖವನ್ನುಂಟು ಮಾಡುತ್ತದೆ. ವಶಪಡಿಸಿಕೊಳ್ಳಲಾದ ಹಣ ನನ್ನ ಸಂಸ್ಥೆಗೆ ಸೇರಿದೆ. ಆ ನಗದು ನನ್ನ ಮದ್ಯದ ಸಂಸ್ಥೆಗಳಿಗೆ ಸಂಬಂಧಿಸಿದೆ ಇದು ಮದ್ಯ ಮಾರಾಟದ ಪ್ರಕ್ರಿಯೆಯಾಗಿದೆ. ಈ ಹಣಕ್ಕೂ ಕಾಂಗ್ರೆಸ್ ಅಥವಾ ಇತರ ಯಾವುದೇ ರಾಜಕೀಯ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಹಣವೆಲ್ಲ ನನ್ನದಲ್ಲ, ಅದು ನನ್ನ ಕುಟುಂಬ ಮತ್ತು ಇತರ ಸಂಬಂಧಿತ ಸಂಸ್ಥೆಗಳಿಗೆ ಸೇರಿದೆ. ಐಟಿ ಇಲಾಖೆಗೆ ಎಲ್ಲದಕ್ಕೂ ನಾನು ಲೆಕ್ಕ ನೀಡುತ್ತೇನೆ ಎಂದು ಹೇಳಿದ್ದಾರೆ.