ನಿರ್ಮಾಣ ಹಂತದ ಶೌಚಾಲಯದಲ್ಲಿ 35 ಹಾವುಗಳು: ವಿಡಿಯೋ ವೈರಲ್

Prasthutha|

ಅಸ್ಸಾಂ: ನಿರ್ಮಾಣ ಹಂತದ ಶೌಚಾಲಯದಲ್ಲಿ ಏಕಕಾಲದಲ್ಲಿ 35 ಹಾವುಗಳು ಪ್ರತ್ಯಕ್ಷವಾದ ಘಟನೆ ಅಸ್ಸಾಂನ ನಗಾಂವ್ ಜಿಲ್ಲೆಯ ಕಲಿಯಾಬೋರ್ ಪ್ರದೇಶದಲ್ಲಿ ನಡೆದಿದೆ.

- Advertisement -

ಹಾವುಗಳನ್ನು ಕಂಡ ತಕ್ಷಣ ಮನೆಯ ಮಾಲೀಕರು ಹಾವು ಹಿಡಿಯುವವರಿಗೆ ಕರೆ ಮಾಡಿದ್ದಾರೆ. ಅವರು ಮನೆಗೆ ನುಗ್ಗಿ ಆ ಹಾವುಗಳನ್ನೆಲ್ಲ ಒಟ್ಟಾಗಿ ಹೊರತೆಗೆದಿದ್ದಾರೆ.

ಹೊಸದಾಗಿ ನಿರ್ಮಿಸಿರುವ ಶೌಚಾಲಯದಲ್ಲಿ ಮನೆಯಲ್ಲಿ ಸುಮಾರು 35 ಪುಟ್ಟ ಪುಟ್ಟ ಹಾವಿನ ಮರಿಗಳು ಕಂಡು ಬಂದಿದ್ದು, ಮನೆಯವರು ಬೆಚ್ಚಿಬಿದ್ದಿದ್ದಾರೆ.

- Advertisement -

ನಾಗೋನ್ ಜಿಲ್ಲೆಯ ಕಲಿಬೊರ್ ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬರು ಮನೆಯೊಂದನ್ನು ಕಟ್ಟಿಸುತ್ತಿದ್ದು, ಬಾತ್ರೂಮ್ ಬಳಿ ಶಬ್ದ ಕೇಳಿ ಬರುತ್ತಿದ್ದ ಕಾರಣ ಪರಿಶೀಲಿಸಿದ ವೇಳೆ ಅವರಿಗೆ ಹಾವುಗಳು ಕಂಡು ಬಂದಿದೆ.

ನಂತರ ಇವುಗಳನ್ನು ಹೊರಗೆ ತೆಗೆದು ಜೊಯಿಸಾಗರ್‌ ದಲಾನಿ ಪ್ರದೇಶದಲ್ಲಿ ಬಿಡಲಾಗಿದೆ.ಬಿಡಲಾಗಿದೆ. ಆದರೆ, ಈ ಹಾವುಗಳು ಹೇಗೆ ಇಲ್ಲಿಗೆ ಬಂದವು ಎನ್ನುವ ಕುರಿತಾಗಿ ಮನೆಯವರಿಗೆ ತಿಳಿದು ಬಂದಿಲ್ಲ.

ಶೌಚಾಲಯದಲ್ಲಿ ಹಾವು ಸೇರಿಕೊಂಡ ವೇಳೆ ಮೊಟ್ಟೆ ಇಟ್ಟಿದ್ದು, ಅವುಗಳು ಒಡೆದು ಮರಿಗಳಾದ ಕಾರಣ ಇಷ್ಟೊಂದು ಹಾವುಗಳು ಪತ್ತೆಯಾಗಿದೆ ಎನ್ನಲಾಗಿದೆ.



Join Whatsapp