ಬರ್ನ್: ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣ ನಡೆಸಲಾರಂಭಿಸಿದ ಬಳಿಕ ಇದುವರೆಗೆ 3.5 ಕೋಟಿ ಮಂದಿ ಉಕ್ರೇನ್ ದೇಶವನ್ನು ತೊರೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಎರಡನೇ ವಿಶ್ವ ಮಹಾಯುದ್ಧದ ಬಳಿಕ ಐರೋಪ್ಯ ಒಕ್ಕೂಟ ಕಂಡ ಅತ್ಯಂತ ದೊಡ್ಡ ಜನರ ವಲಸೆ ಇದು ಎಂದು ಸ್ವಿಝರ್ಲೆಂಡ್ ನ ಜಿನೇವಾದಲ್ಲಿರುವ ವಿಶ್ವಸಂಸ್ಥೆಯ ನಿರಾಶ್ರಿತರ ಆಯುಕ್ತರ ಕಚೇರಿ (ಯುಎನ್‌ಎಚ್‌ಸಿಆರ್) ಪ್ರಕಟನೆಯಲ್ಲಿ ತಿಳಿಸಿದೆ.
ಪೋಲೆಂಡ್‌ಗೆ 21 ಲಕ್ಷ, ರೊಮೇನಿಯಾಗೆ 5.40 ಲಕ್ಷ, ಮಾಲ್ಡೋವಾಕ್ಕೆ 3.67 ಲಕ್ಷಕ್ಕಿಂತ ಅಧಿಕ ಮಂದಿ ಉಕ್ರೇನ್ ಜನರು ನಿರಾಶ್ರಿತರಾಗಿ ಪ್ರವೇಶಿಸಿದ್ದಾರೆ ಎನ್ನಲಾಗಿದೆ.
ರಷ್ಯಾ ಉಕ್ರೇನ್ ಯುದ್ಧದಿಂದಾಗಿ ಎರಡೂ ದೇಶಗಳಲ್ಲೂ ಹಲವಾರು ಸಾವು ನೋವುಗಳು ಸಂಭವಿಸಿವೆ.