31 ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

Prasthutha|

ಬೆಂಗಳೂರು: ನಾಲ್ವರು ಆಯ್ಕೆ ಶ್ರೇಣಿ, 16 ಹಿರಿಯ ಶ್ರೇಣಿ ಹಾಗೂ 11 ಕಿರಿಯ ಶ್ರೇಣಿ ಸೇರಿ ಒಟ್ಟು 31 ಮಂದಿ ಕೆಎಎಸ್‌ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಸ್ಥಳಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.

- Advertisement -

ಪ್ರಕಾಶ್‌ ಗೋಪು ರಜಪೂತ್‌- ಕಲಬುರಗಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತ (ಭೂನಿರ್ವಹಣೆ, ಯೋಜನೆ), ಸಂಗಪ್ಪ- ಮಹಾರಾಣಿ ಕ್ಲಸ್ಟರ್‌ ವಿವಿ ಕುಲಸಚಿವ (ಆಡಳಿತ), ಕವಿತಾ ರಾಜಾರಾಮ್‌- ಮೈಸೂರು ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ (ಆಡಳಿತ ಮತ್ತು ಅಭಿವೃದ್ಧಿ), ಪಿ. ಶಿವರಾಜು- ಮೈಸೂರು ಹೆಚ್ಚುವರಿ ದಂಡಾಧಿಕಾರಿ.

ಸಿದ್ರಾಮೇಶ್ವರ- ಕೊಪ್ಪಳ ಹೆಚ್ಚುವರಿ ಜಿಲ್ಲಾಧಿಕಾರಿ, ರವಿಚಂದ್ರ ನಾಯಕ್‌- ಕೆಎಸ್‌ಬಿಸಿಎಲ್‌ ಪ್ರಧಾನ ವ್ಯವಸ್ಥಾಪಕ (ಆಡಳಿತ ಮತ್ತು ಮಾನವ ಸಂಪನ್ಮೂಲ), ಎಲಿಷಾ ಆಂಡ್ರೋಸ್‌- ರಿಮ್ಸ್‌ ಮುಖ್ಯ ಆಡಳಿತಾಧಿಕಾರಿ, ಸಿ.ಮಂಜುನಾಥ- ರಾಜೀವಗಾಂಧಿ ವಸತಿ ನಿಗಮದ ಕಂದಾಯ ಕೋಶ ಮುಖ್ಯಸ್ಥ, ರೇಷ್ಮಾ ಹಾನಗಲ್‌- ಹೊನ್ನಾಳಿ ಉಪವಿಭಾಗಾಧಿಕಾರಿ, ಸೌಜನ್ಯಾ ಭರಣಿ- ಕೃಷಿ ಇಲಾಖೆ ಜಂಟಿ ನಿರ್ದೇಶಕಿ (ಆಡಳಿತ), ಸಿ. ಮದನ್‌ ಮೋಹನ್‌- ಇ ಆಡಳಿತ ಯೋಜನಾ ನಿರ್ದೇಶಕ, ಸಿ.ಆರ್‌. ಕಲ್ಪಶ್ರೀ- ಮೈಸೂರು ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ, ಪಿ.ವಿ. ಪೂರ್ಣಿಮಾ- ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ಎಂಡಿ.

- Advertisement -

ಬಿ.ಎನ್‌. ವೀಣಾ- ಮಡಿಕೇರಿ ಹೆಚ್ಚುವರಿ ಜಿಲ್ಲಾಧಿಕಾರಿ, ರಾಮಚಂದ್ರ ಗಡದೆ- ಕಲಬುರಗಿ ಎನ್‌ಎಚ್‌ಎಐ ವಿಶೇಷ ಭೂಸ್ವಾಧೀನಾಧಿಕಾರಿ, ಎ.ಎನ್‌. ರಘುನಂದನ್‌- ನಗರಾಭಿವೃದ್ಧಿ ಇಲಾಖೆ ಉಪ ಕಾರ್ಯದರ್ಶಿ, ಪ್ರಶಾಂತ ಹನಗಂಡಿ- ಕಾಡಾ ಉಪ ಆಡಳಿತಾಧಿಕಾರಿ, ತಬಸ್ಸುಮ್‌ ಜಹೇರಾ- ತುಮಕೂರು ಕೆಎಐಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ, ಆರ್‌.ಪ್ರತಿಭಾ- ಬಿಬಿಎಂಪಿ ಜಂಟಿ ಆಯುಕ್ತೆ (ಘನತ್ಯಾಜ್ಯ ನಿರ್ವಹಣೆ), ಆರ್‌. ಚಂದ್ರಯ್ಯ- ಹಿಂದುಳಿ ವರ್ಗಗಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ (ವಸತಿ ನಿಲಯ).

ಗಂಗಾಧರ ಶಿವಾನಂದ ಮಳಗಿ- ಕೃಷ್ಣಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ, ವಿಜಯಪುರ, ಶಾಲುಂಹುಸೇನ್‌- ಯೋಜನ ನಿರ್ದೇಶನ, ವಿಜಯಪುರ ನಗರಾಭಿವೃದ್ಧಿ ಕೋಶ, ಪಿ.ಎಸ್‌. ಮಹೇಶ್‌- ಬಿಬಿಎಂಪಿ ಸಹಾಯಕ ಆಯುಕ್ತ (ಶಿಕ್ಷಣ), ಡಾ| ಎಸ್‌.ಕಿರಣ್‌- ಸಂಜಯಗಾಂಧಿ ಆಸ್ಪತ್ರೆ, ಮುಖ್ಯ ಆಡಳಿತಾಧಿಕಾರಿ, ಬೆಂಗಳೂರು. ಎಚ್‌. ಕೋಟ್ರೇಶ್‌- ಕಾರ್ಯದರ್ಶಿ, ಕೇಂದ್ರ ಪರಿಹಾರ ಸಮಿತಿ, ಬೆಂಗಳೂರು. ಜಗದೀಶ್‌ ಗಂಗಣ್ಣವರ್‌- ಯೋಜನ ನಿರ್ದೇಶಕ, ರಾಯಚೂರು ನಗರಾಭಿವೃದ್ಧಿ ಕೋಶ. ರೇಷ್ಮಾ ತಾಳಿಕೋಟೆ- ಉಪ ಆಯುಕ್ತರು, ಬೆಳಗಾವಿ ಪಾಲಿಕೆ, ಎಚ್‌.ಬಿ.ವಿಜಯಕುಮಾರ್‌- ಉಪ ಕಾರ್ಯದರ್ಶಿ, ರೇರಾ, ಬೆಂಗಳೂರು. ಜಿ.ಎಚ್‌.ನಾಗಹನುಮಯ್ಯ- ಸಹಾಯಕ ಆಯುಕ್ತರು, ಕೆಐಎಡಿಬಿ, ಬೆಂಗಳೂರು. ಸಾವಿತ್ರಿ ಬಿ.ಕಡಿ-ಮುಖ್ಯ ಆಡಳಿತಾಧಿಕಾರಿ, ಕೊಪ್ಪಳ ವೈದ್ಯಕೀಯ ಕಾಲೇಜು, ಕೆ.ಆರ್‌. ಸುಜಾತಾ- ಉಪ ಕಾರ್ಯದರ್ಶಿ, ಶಿವಮೊಗ್ಗ ಜಿಪಂ.



Join Whatsapp