ಹಿಜಾಬ್ ಧರಿಸಲು ಅವಕಾಶ ನೀಡದ್ದಕ್ಕಾಗಿ ಮನೆಗೆ ವಾಪಸ್ಸಾದ 32 ವಿದ್ಯಾರ್ಥಿಗಳು!

Prasthutha|

ಮಡಿಕೇರಿ: ಹಿಜಾಬ್ ಧರಿಸಲು ಅವಕಾಶ ನೀಡದ್ದಕ್ಕಾಗಿ ನೆಲ್ಲಿಹುದಿಕೇರಿಯ ಶಾಲೆಯ 32 ವಿದ್ಯಾರ್ಥಿಗಳು ಮನೆಗೆ ವಾಪಸ್ಸಾಗಿದ್ದಾರೆ. ಸಮವಸ್ತ್ರವನ್ನ ಧರಿಸಿ ಶಾಲೆಗೆ ಬರಬೇಕೆಂಬ ನಿಯಮವಿದ್ರೂ ಕೂಡ ಇದನ್ನ ಧಿಕ್ಕರಿಸಿ 32 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಆಗಮಿಸಿದ್ದರು. ಹೀಗಾಗಿ, ಇವರಲ್ಲಿ ಮೂವತ್ತೊಂದು ವಿದ್ಯಾರ್ಥಿಗಳನ್ನ ಹಿಂದಕ್ಕೆ ಕಳುಹಿಸಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದಿದೆ.

- Advertisement -

ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರನ್ನ ಸಿಬ್ಬಂದಿ ಶಾಲೆ ಪ್ರವೇಶಿಸದಂತೆ ತಡೆ ಹಿಡಿದು ಎಲ್ಲರೂ ಹಿಜಾಬ್ ಕಳಚಿ ಸಮವಸ್ತದಲ್ಲಿ ಬರುವಂತೆ ಸೂಚಿಸಿದ್ದಾರೆ. ಮೂವತ್ತೆರಡು ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿನಿ ಮಾತ್ರ ಹಿಜಾಬ್ ತೆಗೆದು ಶಾಲೆ ಪ್ರವೇಶಿಸಿದ್ದು, ಮೂವತ್ತೊಂದು ವಿದ್ಯಾರ್ಥಿನಿಯರನ್ನ ಹೊರ ಕಳುಹಿಸಲಾಗಿದೆ. ಇವರೆಲ್ಲರೂ ಕೂಡ 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ. ಈ ಘಟನೆ ಸಂಬAಧ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಶಾಲಾ ಆವರಣದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

Join Whatsapp