30 ಚಿನ್ನದ ಕಳ್ಳಸಾಗಣೆದಾರರು ಲಕ್ನೋ ವಿಮಾನ ನಿಲ್ದಾಣದಿಂದ ಚಿನ್ನದೊಂದಿಗೆ ಪರಾರಿ

Prasthutha|

ಲಕ್ನೋ: ಸುಮಾರು 30 ಚಿನ್ನದ ಕಳ್ಳಸಾಗಣೆದಾರರು ಲಕ್ನೋ ವಿಮಾನ ನಿಲ್ದಾಣದಿಂದ ಚಿನ್ನದೊಂದಿಗೆ ವಿಮಾನ ನಿಲ್ದಾಣದಿಂದ ಪರಾರಿಯಾದ ವಿಚಿತ್ರ ಘಟನೆ ನಡೆದಿದೆ.

- Advertisement -

ಚಿನ್ನ ಕಳ್ಳಸಾಗಣೆದಾರರು ಓಡಿಹೋಗಿರುವ ಮತ್ತು ಭದ್ರತಾ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿರುವ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕ್ಲಿಪ್ ಲಕ್ನೋ ವಿಮಾನ ನಿಲ್ದಾಣದ ನಿರ್ಗಮನ ಸ್ಥಳದ ಬಳಿ ತಲುಪಿದ 30 ಜನರ ಗುಂಪು ನಾಟಕೀಯ ಶೈಲಿಯಲ್ಲಿ ಹೇಗೆ ತಪ್ಪಿಸಿಕೊಂಡರು ಎಂಬುದನ್ನು ತೋರಿಸಿದೆ. ಕರ್ತವ್ಯದಲ್ಲಿದ್ದ ಗಾರ್ಡ್‌ಗಳು ಸಹ ಸ್ಮಗ್ಲರ್ ಗಳು ತಪ್ಪಿಸಿಕೊಳ್ಳುವುದನ್ನು ತಡೆಯಲಿಲ್ಲ.

- Advertisement -

ಕೆಲವು ದಿನಗಳ ಹಿಂದೆ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 36 ಚಿನ್ನದ ಕಳ್ಳಸಾಗಣೆದಾರರನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಬಂಧಿಸಿದ್ದರು. ಆದರೆ ನಾಟಕೀಯ ದೃಶ್ಯದಲ್ಲಿ, 36 ಚಿನ್ನದ ಕಳ್ಳಸಾಗಣೆದಾರರಲ್ಲಿ 30 ಜನರು ವಿಮಾನ ನಿಲ್ದಾಣದಿಂದ ಪರಾರಿಯಾಗಿದ್ದಾರೆ.

ಘಟನೆಯ ನಂತರ ಲಕ್ನೋ ವಿಮಾನ ನಿಲ್ದಾಣದಲ್ಲಿದ್ದ 8 ಅಧಿಕಾರಿಗಳನ್ನು ವಿಮಾನ ನಿಲ್ದಾಣವು ವರ್ಗಾವಣೆ ಮಾಡಿದೆ. ವಿಮಾನ ನಿಲ್ದಾಣದ ಅಧಿಕಾರಿ ಎ.ಕೆ. ಸಿಂಗ್ ಅವರು ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ಎ.ಕೆ. ಸಿಂಗ್ ಅವರನ್ನೂ ವರ್ಗಾವಣೆ ಮಾಡಲಾಗಿದ್ದು, ಪ್ರಕರಣದಲ್ಲಿ ತನಿಖೆಗೆ ಆದೇಶಿಸಲಾಗಿದೆ.



Join Whatsapp