ಕಾರು ಹರಿದು 3 ವರ್ಷದ ಮಗು ಸಾವು..!

Prasthutha|

ಕಾನ್ಪುರ : ಮೂರು ವರ್ಷದ ಮಗುವಿನ ಮೇಲೆ ಕಾರು ಹರಿದು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

- Advertisement -

ಈ ಆಘಾತಕಾರಿ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮನೆಯ ಮುಂಭಾಗದ ನಡು ರಸ್ತೆಯಲ್ಲೇ ಮಗು ಕುಳಿತು ಆಟವಾಡುತ್ತಿದ್ದ ವೇಳೆ ಕಾರು ಮಗುವಿನ ಮೇಲೆ ಹರಿದು ಹೋಗಿದ್ದು, ದೇಹ ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಮಗು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

- Advertisement -




Join Whatsapp