ಬಿಎಂಟಿಸಿ ಬಸ್ ಹರಿದು 3 ವರ್ಷದ ಮಗು ಮೃತ್ಯು

Prasthutha|

ಬೆಂಗಳೂರು: ಬಿಎಂಟಿಸಿ ಬಸ್ ಹರಿದು 3 ವರ್ಷದ ಮಗು ಮೃತಪಟ್ಟಿರುವ ಘಟನೆ ಗಾರೇಪಾಳ್ಯ ಜಂಕ್ಷನ್ ಬಳಿ ನಡೆದಿದೆ.

- Advertisement -


ಬಿಎಂಟಿಸಿ ಬಸ್ ಹರಿದು ಮೂರು ವರ್ಷದ ಅಯಾನ್ ಮೃತಪಟ್ಟಿದ್ದಾನೆ.


ನಿನ್ನೆ (ಅಕ್ಟೋಬರ್ 08) ಅಯಾನ್, ದೊಡ್ಡಮ್ಮನ ಜೊತೆ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬೈಕ್ ನಿಂದ ಕೆಳಗೆ ಬಿದ್ದಿದ್ದ ಅಯಾನ್ ಮೇಲೆ ಬಸ್ ಹರಿದಿದೆ. ಪರಿಣಾಮ ಆಯಾನ್ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ. ಬಗ್ಗೆ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Join Whatsapp