3 ದಿನ, 12 ಗಂಟೆ,150 ಪ್ರಶ್ನೆ; ಸೋನಿಯಾಗೆ ಇಡಿ ವಿಚಾರಣೆ ಅಂತ್ಯ

Prasthutha|

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪದ ಕುರಿತು ಜಾರಿ ನಿರ್ದೇಶನಾಲಯ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿಚಾರಣೆಯನ್ನು ಅಂತ್ಯಗೊಳಿಸಿದೆ. ಮೂರು ದಿನಗಳ ವಿಚಾರಣೆಯಲ್ಲಿ 12 ಗಂಟೆಗಳಲ್ಲಿ 100 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಯಿತು ಎಂದು ತಿಳಿದು ಬಂದಿದೆ.

- Advertisement -

75 ವರ್ಷದ ಸೋನಿಯಾ ಗಾಂಧಿ ಮೂರನೇ ದಿನವಾದ ಇಂದು ತನಿಖಾ ಸಂಸ್ಥೆಯೊಂದಿಗೆ ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು. ಮಂಗಳವಾರ ಸೋನಿಯಾ ಗಾಂಧಿ ಅವರನ್ನು ಆರು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಅವರ ಪುತ್ರ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ವಿಚಾರಣೆ ಐದು ದಿನಗಳ ಕಾಲ ನಡೆದಿದ್ದು, ಸುಮಾರು 150 ಪ್ರಶ್ನೆಗಳನ್ನು ಕೇಳಲಾಗಿದೆ.


ಸೋನಿಯಾ ಗಾಂಧಿಯವರು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮತ್ತು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ನೊಂದಿಗೆ ತೊಡಗಿಸಿಕೊಂಡಿರುವ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ವರದಿಯಾಗಿದೆ. ಜಾರಿ ನಿರ್ದೇಶನಾಲಯವು ಅವರ ಹೇಳಿಕೆಯೊಂದಿಗೆ ರಾಹುಲ್ ಗಾಂಧಿಯವರ ಹೇಳಿಕೆ ಹೊಂದಾಣಿಕೆ ಮಾಡುತ್ತದೆ. ಏಕೆಂದರೆ ಇಬ್ಬರೂ ಯಂಗ್ ಇಂಡಿಯನ್ನಲ್ಲಿ ಹೆಚ್ಚಿನ ಪಾಲುದಾರರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

- Advertisement -


ಇಡಿ ಮತ್ತೆ ಸೋನಿಯಾ ವಿಚಾರಣೆಗೆ ಸಮನ್ಸ್ ನೀಡಿಲ್ಲ ಎಂದು ತಿಳಿದುಬಂದಿದೆ

Join Whatsapp