ಮೂರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ

Prasthutha|

- Advertisement -

ವಿಜಯಪುರ: ತಾಯಿಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ಬಳಿಯ ವಿಠಲವಾಡಿ ತಾಂಡಾದಲ್ಲಿ ನಡೆದಿದೆ.

ತಾಂಡಾ ನಿವಾಸಿ ಗೀತಾ ರಾಮು ಚೌವ್ಹಾಣ (32), ಸೃಷ್ಠಿ (6), ಸಮರ್ಥ (4) ಮತ್ತು ಕಿಶನ್ (3) ಮೃತಪಟ್ಟವರು ಎಂದು ಗುರುತಿಸಲಾಗಿದೆ.

- Advertisement -

ಶನಿವಾರ ರಾತ್ರಿ ಗೀತಾ ಮತ್ತು ಅವರ ಪತಿ ರಾಮು ಮಧ್ಯೆ ಜಗಳವಾಗಿತ್ತಂತೆ. ಆ ಬಳಿಕ ಪತಿ ಮಲಗಿದ್ದ ವೇಳೆ ಮೂವರು‌ ಮಕ್ಕಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Join Whatsapp