ಪಾಕಿಸ್ತಾನದಲ್ಲಿ ಬಸ್ ಅಪಘಾತ: 28 ಜನ ಸಾವು

Prasthutha|

ಕರಾಚಿ: ಕಡಿದಾದ ಬೆಟ್ಟಗಳ ಮಾರ್ಗದಲ್ಲಿ ವೇಗವಾಗಿ ಸಂಚರಿಸುತ್ತಿದ್ದ ಪ್ರಯಾಣಿಕರ ಬಸ್ಸೊಂದು ನದಿ ಕಣಿವೆಗೆ ಉರುಳಿ ಬಿದ್ದು ಮಹಿಳೆಯರು, ಮಕ್ಕಳೂ ಸೇರಿ 28 ಜನ ಮೃತಪಟ್ಟಿರುವ ಘಟನೆ ಬುಧವಾರ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸಂಭವಿಸಿದೆ.

- Advertisement -

ಈ ಬಸ್ ತರಬಾತ್ ನಿಂದ ಕ್ವೆಟ್ಟಾಕ್ಕೆ ತೆರಳುತ್ತಿತ್ತು. ಟಯರ್ ಸ್ಪೋಟಗೊಂಡು ವಾಶುಕ್ ಬಳಿ ನದಿ ಕಣಿವೆಗೆ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ 22ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ಅವರನ್ನು ಬಾಸಿಮಾದ ಆಸ್ಪತ್ರೆಗೆ ದಾಖಲಿಸಲಾಗಿದೆ.

Join Whatsapp