ಹತ್ಯೆಯಾದ ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ: ಸರ್ಕಾರ

Prasthutha|

ಶಿವಮೊಗ್ಗ: ಫೆ.20ರ ರಾತ್ರಿ ಕೊಲೆಯಾದ ಬಜರಂಗದಳ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ.

- Advertisement -

ಹರ್ಷನ ಕುಟುಂಬಸ್ಥರಿಗೆ ಪರಿಹಾರ ನೀಡುವ ಬಗ್ಗೆ ಸಿಎಂ ಬೊಮ್ಮಾಯಿ ಅವರು ಫೋನ್ ಕರೆ ಮೂಲಕ ಪ್ರಕಟಿಸಿದ್ದಾರೆ. ಮಾರ್ಚ್ 6ರಂದು ಹರ್ಷನ ಮನೆಗೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ನಾನು ಹೋಗಿ 25 ಲಕ್ಷ ರೂ ಪರಿಹಾರ ನೀಡುತ್ತೇವೆ ಎಂದು ಈಶ್ವರಪ್ಪ ಹೇಳಿದ್ದಾರೆ. ಹರ್ಷ ಕೊಲೆ ಬಳಿಕ ಆತನ ಕುಟುಂಬಕ್ಕೆ ಬಿಜೆಪಿ ನಾಯಕರು ಸೇರಿ ಹಲವರು ಧನ ಸಹಾಯ ಮಾಡುತ್ತಿದ್ದು, ಇದೀಗ ಸರ್ಕಾರವೂ 25 ಲಕ್ಷ ರೂ. ನೀಡಲಿದೆ.

Join Whatsapp