ಅಮೆರಿಕದಲ್ಲಿ ಮಧ್ಯಂತರ ಚುನಾವಣೆ: ಇಂಡೋ- ಅಮೆರಿಕನ್ ಮುಸ್ಲಿಮ್ ಮಹಿಳೆಗೆ ಅಭೂತಪೂರ್ವ ಜಯ

Prasthutha|

ವಾಷಿಂಗ್ಟನ್: 23 ವರ್ಷದ ಇಂಡೋ- ಅಮೆರಿಕನ್ ಮುಸ್ಲಿಮ್ ಮಹಿಳೆ ನಬೀಲಾ ಸೈಯದ್ ಅವರು ಅಮೆರಿಕದ ಇಲಿನಾಯ್ಸ್ ರಾಜ್ಯ ಶಾಸಕಾಂಗಕ್ಕೆ ನಡೆದ 51ನೇ ಚುನಾವಣೆಯಲ್ಲಿ ಅಭೂತಪೂರ್ವವಾಗಿ ಜಯಗಳಿಸಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಅವರು, ನಬೀಲಾ ಸೈಯದ್ ಎಂಬ 23 ವರ್ಷದ ನಾನು ಇಂಡೋ- ಅಮೆರಿಕನ್ ಮುಸ್ಲಿಮ್ ಮಹಿಳೆ. ನಾವು ರಿಪಬ್ಲಿಕನ್ ಹಿಡಿತದಲ್ಲಿರುವ ಜಿಲ್ಲೆಯ ಉಪನಗರವನ್ನು ಗೆದ್ದಿದ್ದೇವೆ. ಮುಂದಿನ ಜನವರಿಯಲ್ಲಿ ನಾನು ಇಲಿನಾಯ್ಸ್ ಜನರಲ್ ಅಸೆಂಬ್ಲಿಯ ಕಿರಿಯ ಸದಸ್ಯೆಯಾಗಿ ಆಯ್ಕೆಯಾಗುತ್ತೇನೆ ಎಂದು ತಿಳಿಸಿದ್ದಾರೆ.

ಸದ್ಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾದ ನಬೀಲಾ ಸೈಯದ್ ಅವರು ರಿಪಬ್ಲಿಕ್ ಪಕ್ಷದ ಹಾಲಿ ಸದಸ್ಯ ಕ್ರಿಸ್ ಬಾಸ್ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದಾರೆ. ಇದರೊಂದಿಗೆ ಇಲಿನಾಯ್ಸ್ ರಾಜ್ಯ ಶಾಸಕಾಂಗದಲ್ಲಿ ಮೊದಲ ದಕ್ಷಿಣ ಏಷ್ಯಾದ ನಬೀಲಾ ಸೈಯದ್ ಅವರು ರಾಜ್ಯ ವಿಧಾನಸಭೆಯ ಅತ್ಯಂತ ಕಿರಿಯ ಸದಸ್ಯೆಯಾಗಿ ಆಯ್ಕೆಯಾಗಲಿದ್ದಾರೆ.

- Advertisement -

ವೃತ್ತಿಯಲ್ಲಿ ವಕೀಲರಾಗಿರುವ ನಬೀಲಾ ಸೈಯದ್ ಅವರು ಸಮಾನ ಹಕ್ಕು, ಆರೋಗ್ಯ, ಶಿಕ್ಷಣ ಮತ್ತು ತೆರಿಗೆಗಳಂತಹ ವಿಚಾರದಲ್ಲಿ ಹೆಚ್ಚು ಕ್ರಿಯಾಶೀಲಯತೆಯಿಂದ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದ್ದಾರೆ.

ಇಂದಿನ ಮತ್ತು ಮುಂದಿನ ಇಲಿನಾಯ್ಸ್ ಜನಾಂಗ ಉತ್ತಮ ಆರ್ಥಿಕತೆ, ಸುಸಜ್ಜಿತ ಮೂಲಸೌಕರ್ಯ, ಕೈಗೆಟುಕುವ ಆರೋಗ್ಯ ಸೌಲಭ್ಯ ಮತ್ತು ಉನ್ನತ ಶಿಕ್ಷಣವನ್ನು ಹೊಂದಿರುವ ಇಲಿನಾಯ್ಸ್ ಅನ್ನು ನಿರ್ಮಿಸುವ ಯೋಜನೆ ಹಾಕಿರುವುದಾಗಿ ನಬೀಲಾ ಸೈಯದ್ ಅವರು ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದ್ದಾರೆ.

ಬರ್ಕ್ಲಿಯ ಎಂಬಲ್ಲಿನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ರಾಜಕೀಯ ಶಾಸ್ತ್ರ ಮತ್ತು ಬಿಸಿನೆಸ್ ವಿಷಯದಲ್ಲಿ ಪದವೀಧರೆಯಾದ ನಬೀಲಾ ಸೈಯದ್ ಅವರು ಸ್ಥಳೀಯ ವ್ಯವಹಾರಗಳಿಗೆ ನೆರವಾಗುವ ಪ್ರೋ – ಬೊನೊ ಕನ್ಸಲ್ಟಿಂಗ್ ಸಂಸ್ಥೆಯ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು.



Join Whatsapp