ಉತ್ತರ ಸಿಕ್ಕಿಂನಲ್ಲಿ ಮೇಘಸ್ಪೋಟ: 23 ಯೋಧರು ನಾಪತ್ತೆ

Prasthutha|

ಸಿಕ್ಕಿಂ: ಸಿಕ್ಕಿಂನಲ್ಲಿ ಮೇಘಸ್ಪೋಟದಿಂದ ಪ್ರವಾಹ ಉಂಟಾಗಿ 23 ಯೋಧರು ನಾಪತ್ತೆಯಾಗಿದ್ದಾರೆ.

- Advertisement -

ಉತ್ತರ ಸಿಕ್ಕಿಂನ ಲೋನಕ ಸರೋವರದ ಬಳಿ ಹಠಾತ್ ಮೇಘಸ್ಪೋಟ ಸಂಭವಿಸಿದ ಪರಿಣಾಮ ಇಲ್ಲಿಯ ತೀಸ್ತಾ ನದಿಯ ನೀರಿನ ಮಟ್ಟ ದಿಢೀರ್ ಏರಿಕೆ ಕಂಡಿದೆ ಮತ್ತು ಅನೇಕ ಪ್ರದೇಶಗಳು ಜಲಾವೃತಗೊಂಡಿವೆ.


ಏಕಾಏಕಿ ನೀರು ಹೆಚ್ಚಾದ್ದರಿಂದ ನದಿ ಪ್ರಾಂತ್ಯದಲ್ಲಿ ನಿರ್ಮಿಸಲಾಗಿದ್ದ ಸೇನಾ ನೆಲೆಗಳಿಗೂ ನೀರು ನುಗ್ಗಿವೆ. ಪ್ರವಾಹದಲ್ಲಿ 23 ಯೋಧರು ನಾಪತ್ತೆಯಾಗಿದ್ದಾರೆ. ಕೆಲ ಸೇನಾ ವಾಹನಗಳು ಕೊಚ್ಚಿಹೋಗಿವೆ ಎಂದು ವರದಿಯಾಗಿದೆ.

- Advertisement -

Join Whatsapp