22,000 ಕೋಟಿ ರೂ. ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಿದ ರಾಜ್ಯ ಸರ್ಕಾರ

Prasthutha|

- Advertisement -

ಬೆಂಗಳೂರು: ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಏಳು ಕಂಪನಿಗಳೊಂದಿಗೆ 22,000 ಕೋಟಿ ರೂಪಾಯಿಗಳ ಹೂಡಿಕೆ ಪ್ರಸ್ತಾವನೆಗಳೊಂದಿಗೆ ಎಂಒಯುಗಳಿಗೆ ಸಹಿ ಹಾಕಿರುವುದಾಗಿ ಕರ್ನಾಟಕ ಸರ್ಕಾರ ತಿಳಿಸಿದೆ.

- Advertisement -

ಸಚಿವ ಎಂಬಿ ಪಾಟೀಲ್ ಹೇಳಿಕೆ ನೀಡಿದ್ದು, ಮಂಗಳವಾರ ಸಹಿ ಮಾಡಲಾದ ಎಂಒಯುಗಳ ಭಾಗವಾಗಿ, ವೆಬ್ ವರ್ಕ್ಸ್ ರಾಜ್ಯದಲ್ಲಿ ರೂ 20,000 ಕೋಟಿ ಡಾಟಾ ಸೆಂಟರ್ ಪಾರ್ಕ್ ಅನ್ನು ಸ್ಥಾಪಿಸಲು ಪ್ರಸ್ತಾಪಿಸಿದೆ.ಆದರೆ ಇತರ ನಾಲ್ಕು ಕಂಪನಿಗಳು ಒಟ್ಟು ರೂ 2,000 ಕೋಟಿ ಹೂಡಿಕೆ ಮಾಡಲು ಯೋಜಿಸಿವೆ ಎಂದು ತಿಳಿಸಿದ್ದಾರೆ.

ಲುಲು ಗ್ರೂಪ್ ವಿಜಯಪುರ ಜಿಲ್ಲೆಯಲ್ಲಿ ಆಹಾರ ಸಂಸ್ಕರಣೆಗೆ ಮುಂದಾಗಿದ್ದು, ರಫ್ತಿಗೆ ಮೀಸಲಾಗಿರುವ ಸ್ಥಾವರದಲ್ಲಿ 300 ಕೋಟಿ ರೂಪಾಯಿ ಹೂಡಿಕೆ ಮಾಡಲು ಯೋಜಿಸಲಾಗಿದೆ ಎಂದು ಸಚಿವರ ಹೇಳಿಕೆ ತಿಳಿಸಿದೆ.

ಟಕೆಡಾ ಫಾರ್ಮಾಸ್ಯುಟಿಕಲ್ಸ್ ಬೆಂಗಳೂರಿನಲ್ಲಿ ಜಾಗತಿಕ ನಾವೀನ್ಯತೆ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿದೆ ಮತ್ತು ಸೂಕ್ತವಾದ ಕ್ಯಾಂಪಸ್ ಸ್ಥಳಗಳಿಗಾಗಿ ಸಕ್ರಿಯವಾಗಿ ಶೋಧಿಸುತ್ತಿದೆ ಎಂದೂ ಸಚಿವರ ಹೇಳಿಕೆ ಹೇಳಿದೆ.



Join Whatsapp