22 ಯೂಟ್ಯೂಬ್ ಚಾನೆಲ್ ಗಳು ಸ್ಥಗಿತ; ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಹತ್ವದ ಆದೇಶ

Prasthutha|

ಹೊಸದಿಲ್ಲಿ: ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ಪಾಕಿಸ್ತಾನದ 4 ಚಾನೆಲ್‌ಗ‌ಳು ಹಾಗೂ ಭಾರತದ 18 ಯೂಟ್ಯೂಬ್‌  ಸುದ್ದಿವಾಹಿನಿಗಳನ್ನು ಬ್ಲಾಕ್‌ ಮಾಡುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚಿಸಿದೆ.

- Advertisement -

ಕಳೆದ ವರ್ಷದ ಫೆಬ್ರವರಿಯಲ್ಲಿ ಐಟಿ ನಿಯಮಗಳು-2021 ಜಾರಿಯಾದ ಬಳಿಕ, ಇದೇ ಮೊದಲ ಬಾರಿ ಭಾರತೀಯ ಯೂಟ್ಯೂಬ್‌ ನ್ಯೂಸ್‌ ಪಬ್ಲಿಷರ್‌ಗಳ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.

22 ಯೂಟ್ಯೂಬ್‌ ಚಾನೆಲ್‌ಗ‌ಳು, 3 ಟ್ವಿಟರ್‌ ಖಾತೆಗಳು, ಒಂದು ಫೇಸ್‌ಬುಕ್‌ ಖಾತೆ ಮತ್ತು ಒಂದು ನ್ಯೂಸ್‌ ವೆಬ್‌ಸೈಟ್‌  ಬ್ಲಾಕ್‌ ಮಾಡುವಂತೆ   ಸಚಿವಾಲಯ ಆದೇಶ ಹೊರಡಿಸಿದೆ. ಈ ಮೂಲಕ, 2021ರ ಡಿಸೆಂಬರ್‌ನಿಂದ ಈವರೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಭದ್ರತೆ, ಸಾರ್ವಭೌಮತೆ ಮತ್ತು ಸಮಗ್ರತೆ, ಕಾನೂನು ಸುವ್ಯವಸ್ಥೆ ಇತ್ಯಾದಿಗಳ ಹೆಸರಲ್ಲಿ ಒಟ್ಟು 78 ಯೂಟ್ಯೂಬ್‌  ಸುದ್ದಿವಾಹಿನಿಗಳು ಹಾಗೂ ಹಲವು ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನಿಷೇಧಿಸಿದೆ.

Join Whatsapp