ನವದೆಹಲಿ: ಮೈನಾರಿಟಿ ಮೀಡಿಯಾ ಫೌಂಡೇಶನ್ ಮತ್ತು ಮುಸ್ಲಿಂ ಮಿರರ್ ಜಂಟಿಯಾಗಿ 2024 ರಲ್ಲಿ ಭಾರತದಲ್ಲಿ 100 ಅತ್ಯಂತ ಪ್ರಭಾವಶಾಲಿ ಮುಸ್ಲಿಮರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪಾಪ್ಯುಲರ್ ಫ್ರಂಟ್ ಮಾಜಿ ಅಧ್ಯಕ್ಷ ಇ ಅಬೂಬಕರ್ ಪಟ್ಟಿಯಲ್ಲಿದ್ದಾರೆ.
ಕಾರ್ಯಾಚರಣೆಯ ಶ್ರೇಷ್ಠತೆ, ನಾಯಕತ್ವ ಕೌಶಲ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಾಮಾಜಿಕ ಬದಲಾವಣೆಯನ್ನು ಪರಿಶೀಲಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಮುಸ್ಲಿಮರನ್ನು ನಕಾರಾತ್ಮಕವಾಗಿ ಬಿಂಬಿಸುವ ಕಾರ್ಪೊರೇಟ್ ಮಾಧ್ಯಮ-ಸಂಘಪರಿವಾರದ ಪ್ರಚಾರವನ್ನು ಮುರಿಯುವ ಉದ್ದೇಶದಿಂದ ಪಟ್ಟಿಯನ್ನು ರಚಿಸಲಾಗಿದೆ ಎಂದು ಮುಸ್ಲಿಂ ಮಿರರ್‌ನ ಸಂಸ್ಥಾಪಕ ಸಂಪಾದಕ ಸೈಯದ್ ಜುಬೇರ್ ಅಹಮದ್ ಹೇಳಿದ್ದಾರೆ.
ಪಟ್ಟಿಯಲ್ಲಿ ಸೇರ್ಪಡೆಗೊಂಡವರು ದೇಶ ಮತ್ತು ಸಮುದಾಯದ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸಿರುವುದು ಕಂಡು ಬಂದಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ಅಸ್ಸಾಂನಿಂದ ಗುಜರಾತ್‌ವರೆಗೆ ವಿವಿಧ ಮುಸ್ಲಿಂ ಸಮುದಾಯಗಳ ಸದಸ್ಯರನ್ನು ಪರಿಗಣಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಎ.ಆರ್.ರಹಮಾನ್, ಎ.ಪಿ.ಅಬೂಬಕರ್ ಮುಸ್ಲಿಯಾರ್, ಅಮೀರ್ ಇದ್ರಿಸಿ, ಅಮೀರ್ ಖಾನ್, ಅಬ್ದುಲ್ ಹಮೀದ್ ನೌಮಾನಿ, ಅಬ್ದುಲ್ ಖಾದಿರ್ ಫಸಲಾನಿ, ಅಬ್ದುಲ್ ಖಾದಿರ್, ಅಬ್ದುಲ್ಲಾ ಕುಂಞಿ, ಸಲ್ಮಾನ್ ಖಾನ್, ಅರ್ಷದ್ ಮದನಿ ಮೊದಲಾದವರು 100 ಮಂದಿಯ ಪಟ್ಟಿಯಲ್ಲಿದ್ದಾರೆ.