2021ರ ಹಜ್ಜ್ ಯಶಸ್ವಿ: ಸೌದಿ ಅರೇಬಿಯಾ ಘೋಷಣೆ

Prasthutha|

ಮಿನಾ, ಜುಲೈ 23: ಪವಿತ್ರ ಮಕ್ಕಾ ಮಸ್ಜಿದ್ ನಲ್ಲಿ ಹಜ್ಜಾಜಿಗಳು ಗುರುವಾರ ಮಧ್ಯಾಹ್ನ ವಿದಾಯ ತವಾಫ್ ಆಚರಣೆ ಮಾಡುವ ಮೂಲಕ ಮಕ್ಕಾದಿಂದ ನಿರ್ಗಮಿಸಿದ್ದು, ಈ ಮೂಲಕ ಈ ಬಾರಿಯ ಹಜ್ಜ್ ಯಶಸ್ವಿಯಾಗಿದೆ. ಈ ವರ್ಷದ ಹಜ್ಜ್ ಸಂದರ್ಭದಲ್ಲಿ ಕೋವಿಡ್ -19 ಸೇರಿದಂತೆ ಯಾವುದೇ ಸಮಸ್ಯೆಗಳಿಲ್ಲದೆ ಹಜ್ಜ್ ಯೋಜನೆ ಯಶಸ್ವಿಯಾಗಿದೆಯೆಂದು ಸೌದಿ ಆರೋಗ್ಯ ಸಚಿವ ಡಾ. ತೌಫೀಕ್ ಅಲ್- ರಬಿಯಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

- Advertisement -

ಹಜ್ಜ್ ಕರ್ಮಗಳಲ್ಲೊಂದಾದ ಹಜ್ಜಾಜಿ ಗಳು ಮೀನಾದ ಮೂರು ಸ್ತಂಭಗಳ ಮೇಲೆ ಕಲ್ಲೆಸೆಯುವ ಕರ್ಮವು ಯಶಸ್ವಿಯಾಗಿ ನಡೆಯಿತು. ಈ ಆಚರಣೆಯ ಉದ್ದಕ್ಕೂ ಯಾತ್ರಾರ್ಥಿಗಳು ಸಾಕಷ್ಟು ಮುನ್ನೆಚ್ಚರಿಕಾ ಮತ್ತು ಸುರಕ್ಷಾ ಕ್ರಮಗಳನ್ನು ಪಾಲಿಸಿಕೊಂಡು ಎರಡನೇ ದಿನದ ವಿಧಿವಿಧಾನವನ್ನು ಪೂರ್ತಿಗೊಳಿಸಿದರು.

ಯಾತ್ರಿಕರು ಸಾಮಾನ್ಯವಾಗಿ ಮೂರು ದಿನಗಳ ಕಾಲ ಮಿನಾದಲ್ಲಿ ತಶ್ರೀಕ್ ದಿನಗಳಿಗಾಗಿ ಕಳೆಯುತ್ತಾರೆ. ಆದಾಗ್ಯೂ, ಎರಡನೇ ದಿನದ ಸೂರ್ಯಾಸ್ತದ ಮೊದಲು ಯಾತ್ರಾರ್ಥಿಗಳು ಮೀನಾ ಗಡಿಯಿಂದ ನಿರ್ಗಮಿಸುವ ಷರತ್ತಿನ ಮೇಲೆ ಮೀನಾದಲ್ಲಿ ಎರಡು ದಿನಗಳ ಕಾಲ ಇರಲು ಅನುಮತಿ ಇದೆ. ತಾಜೋಲ್ ಅಥವಾ ಆತುರದ ಹಜ್ಜ್ ಎಂದು ಕರೆಯುವ ಈ ಪದ್ದತಿಯಲ್ಲಿ ಎರಡನೇ ದಿನದ ಸೂರ್ಯ ಅಸ್ತಮದ ಮೊದಲು ಮೀನಾ ಗಡಿಯನ್ನು ದಾಟಿದರೆ ಮೂರನೇ ದಿನದ ಕಲ್ಲೆಸೆಯುವ ಪದ್ಧತಿಯಿಂದ ವಿನಾಯಿತಿ ದೊರೆಯಲಿದೆ. ಸೂರ್ಯ ಅಸ್ತಮದ ಮೊದಲು ಮೀನಾ ಗಡಿ ದಾಟದೇ ಹೋದಲ್ಲಿ ಮೂರನೇ ದಿನವನ್ನು ಮೀನಾದಲ್ಲೇ ಕಳೆಯಲು ನಿರ್ಬಂಧಿತರಾಗುತ್ತಾರೆ.

- Advertisement -

ಹಜ್ಜ್ ಯಾತ್ರಾರ್ಥಿಗಳಿಗೆ ಕಳಪೆ ದರ್ಜೆಯ ಆಹಾರ ಪೂರೈಸಿದ ದೂರಿನ ಹಿನ್ನೆಲೆಯಲ್ಲಿ ಹಜ್ಜ್ ಸೇವಾ ಕಂಪೆನಿಗಳ ವಿರುದ್ಧ ಮಕ್ಕಾ ಮುನ್ಸಿಪಾಲಿಟಿ, ಸೌದಿ ಆಹಾರ ಮತ್ತು ಡ್ರಗ್ ಪ್ರಾಧಿಕಾರದ ಜಂಟಿ ಸಹಯೋಗದೊಂದಿಗೆ ತನಿಖೆ ನಡೆಸಿದ ವರದಿ ಆಧಾರದಲ್ಲಿ ಈ ಕಂಪೆನಿಗಳಿಗೆ ಕಠಿಣ ದಂಡ ವಿಧಿಸುವುದಾಗಿ ಹಜ್ಜ್ ಸಚಿವಾಲಯ ಭರವಸೆ ನೀಡಿದೆ. ಖಾಸಗಿ ಕಂಪೆನಿಗಳು ಯಾತ್ರಾರ್ಥಿಗಳಿಗೆ ಒದಗಿಸುವ ಸೇವೆಗಳು ಸರ್ಕಾರಿ ಅಧಿಕಾರಿಗಳು ನೀಡುವ ಗುಣಮಟ್ಟಕ್ಕೆ ಹೊಂದಿಕೆಯಾಗಬೇಕು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.



Join Whatsapp