ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡವರಲ್ಲಿ ರೈತರಿಗಿಂತ ಉದ್ಯಮಿಗಳೇ ಹೆಚ್ಚು!

Prasthutha|

ಹೊಸದಿಲ್ಲಿ: 2020 ಕ್ಯಾಲೆಂಡರ್ ವರ್ಷದಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ವರದಿ ಮಾಡಿದೆ.

- Advertisement -


2020ರ ಅವಧಿಯಲ್ಲಿ ಒಟ್ಟು 10,677 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೇ ಅವಧಿಯಲ್ಲಿ ದೇಶದಾದ್ಯಂತ 11,716 ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

2015 ರಲ್ಲಿ, 100 ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಾಗ ರೈತರ ಆತ್ಮಹತ್ಯೆಯ ಅನುಪಾತ 144 ಇತ್ತು. ಆದರೆ ಇದು 2020 ರ ವೇಳೆಗೆ 100:91 ಆಗಿದೆ. ಆರ್ಥಿಕ ಮುಗ್ಗಟ್ಟಿನಿಂದ ಹೆಚ್ಚಿನ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ, ಕೌಟುಂಬಿಕ ಸಂಬಂಧಗಳಲ್ಲಿನ ಸಮಸ್ಯೆಗಳು ಕೂಡಾ ಉದ್ಯಮಿಗಳು ಆತ್ಮಹತ್ಯೆ ಎಸಗಲು ಕಾರಣವಾಗಿವೆ ಎಂದು ವರದಿ ತಿಳಿಸಿದೆ.

- Advertisement -

2020 ರ ವೇಳೆಗೆ, ಆತ್ಮಹತ್ಯೆ ಮಾಡಿಕೊಳ್ಳುವ ಉದ್ಯಮಿಗಳ ಸಂಖ್ಯೆಯು 29.4% ಹೆಚ್ಚಾಗಿದೆ. 2019 ರಲ್ಲಿ ಈ ಬೆಳವಣಿಗೆಯು 13.3% ರಷ್ಟಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆಯು ಹಿಂದಿನ ವರ್ಷಕ್ಕಿಂತ 3.9% ರಷ್ಟು ಹೆಚ್ಚಾಗಿದೆ.


ಉದ್ಯಮಿಗಳ ಆತ್ಮಹತ್ಯೆ ವರದಿಯ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಕ್ಕೂಟ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರು ಮತ್ತು ಉದ್ಯಮಿಗಳು ಒಕ್ಕೂಟ ಸರ್ಕಾರದ “ಕೆಟ್ಟ ನೀತಿಗಳ” ಬಲಿಪಶುಗಳಾಗಿದ್ದಾರೆ ಎಂದು ಅವರು ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಡೇಟಾವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.


“ಉದ್ಯಮಿಗಳಾಗಲಿ ಅಥವಾ ರೈತರಾಗಲಿ, ಎಲ್ಲರೂ ಒಕ್ಕೂಟ ಸರ್ಕಾರದ ಕೆಟ್ಟ ನೀತಿಗಳ ಬಲಿಪಶುಗಳು. ಆರ್ಥಿಕತೆಯನ್ನು ಸರಿಪಡಿಸಿ, ಜೀವಗಳನ್ನು ಉಳಿಸಿ” ಎಂದು ಅವರು ಒತ್ತಾಯಿಸಿದ್ದಾರೆ.



Join Whatsapp