2008ರ ಜೈಪುರ ಸರಣಿ ಬಾಂಬ್ ಸ್ಫೋಟ: ಎಲ್ಲಾ ಆರೋಪಿಗಳು ಖುಲಾಸೆ

Prasthutha|

ಜೈಪುರ: 2008ರ ಜೈಪುರ ಸರಣಿ ಬಾಂಬ್ ಸ್ಫೋಟ ಪ್ರಕರಣದ ಎಲ್ಲ ಆರೋಪಿಗಳನ್ನು ರಾಜಸ್ಥಾನ ಹೈಕೋರ್ಟ್ ಖುಲಾಸೆಗೊಳಿಸಿದೆ.

- Advertisement -


2008ರಲ್ಲಿ ಜೈಪುರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 71 ಮಂದಿ ಮೃತಪಟ್ಟು, 180ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ವಿಚಾರಣಾ ನ್ಯಾಯಾಲಯವು ಆರೋಪಿಗಳಿಗೆ ಮರಣದಂಡನೆ ವಿಧಿಸಿತ್ತು. ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಯಿತು.


ನ್ಯಾಯಮೂರ್ತಿಗಳಾದ ಪಂಕಜ್ ಭಂಡಾರಿ ಮತ್ತು ಸಮೀರ್ ಜೈನ್ ಅವರ ವಿಭಾಗೀಯ ಪೀಠ ಬುಧವಾರ ತೀರ್ಪು ಪ್ರಕಟಿಸಿದೆ.
2008ರ ಮೇ 13ರಂದು ಜೈಪುರದ ಮನಾಕ್ ಚಾವ್ಕ್ ಖಾಂಡಾ, ಚಾಂದ್ ಪೋಲ್ ಗೇಟ್, ಬಡೀ ಚೌಪಾಡ್, ಛೋಟಿ ಚೌಪಾಡ್, ಟ್ರಿಪೋಲಿಯಾ ಗೇಟ್, ಜೋಹ್ರಿ ಬಜಾರ್ ಮತ್ತು ಸಂಗನೇರಿ ಗೇಟ್ ಗಳಲ್ಲಿ ಒಂದರ ನಂತರ ಒಂದರಂತೆ ಬಾಂಬ್ ಸ್ಫೋಟ ಸಂಭವಿಸಿತ್ತು.

- Advertisement -


ಸಂಜೆ ಸಂಭವಿಸಿದ ಸ್ಫೋಟದಲ್ಲಿ 71 ಜನರು ಸಾವನ್ನಪ್ಪಿ 185ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ರಾಮಚಂದ್ರ ದೇವಸ್ಥಾನದ ಬಳಿ ಒಂದು ಜೀವಂತ ಬಾಂಬ್ ಪತ್ತೆಯಾಗಿದ್ದು, ಅದನ್ನು ಬಾಂಬ್ ನಿಷ್ಕ್ರಿಯ ದಳ ನಿಷ್ಕ್ರಿಯಗೊಳಿಸಿತ್ತು.



Join Whatsapp