ತಿರುವಣ್ಣಾಮಲೈ ದೇವಾಲಯಕ್ಕೆ 200 ದಲಿತರ ಪ್ರವೇಶ; ಜಿಲ್ಲಾಡಳಿತದಿಂದಲೇ ವ್ಯವಸ್ಥೆ

Prasthutha|

ಚೆನ್ನೈ: ಶತಮಾನಗಳಿಂದ ತಿರುಣ್ಣಾಮಲೈನ ದೇವಾಲಯವೊಂದಕ್ಕೆ ದಲಿತರಿಗೆ ಪ್ರವೇಶ ಇರಲಿಲ್ಲ. ಪ್ರವೇಶದ ವ್ಯವಸ್ಥೆ ಮಾಡುವಂತೆ ಸರಕಾರವೇ ಸೂಚಿಸಿದ್ದರಿಂದ ಜಿಲ್ಲಾಡಳಿತದ ಉಸ್ತುವಾರಿಯಲ್ಲಿ ಪೊಲೀಸರೇ 200ಕ್ಕೂ ಹೆಚ್ಚು ದಲಿತರನ್ನು ದೇವಾಲಯದೊಳಕ್ಕೆ ಮುನ್ನಡೆಸಿದರು. ಮುಖ್ಯವಾಗಿ ಮಹಿಳೆಯರು ದೇವರ ಮೂರ್ತಿಯನ್ನು ಮುಟ್ಟಿ ಹೂಮಾಲೆ ಹಾಕಿ ಆನಂದ ಪಟ್ಟರು.  

- Advertisement -

ಜಿಲ್ಲಾ ಎಸ್ ಪಿ ಕಾರ್ತಿಕೇಯನ್ ಅವರು ಎಲ್ಲವೂ ಸುಸೂತ್ರವಾಗಿ ಮುಗಿಯಿತು ಎಂದರು. ಡಿಐಜಿ ಮುತ್ತುಸ್ವಾಮಿಯವರು ಈಗಲೂ ವಿರೋಧಿಸುವವರು ಇದ್ದಾರೆ. 200 ಜನರನ್ನು ದೇವಾಲಯದೊಳಕ್ಕೆ ಒಯ್ಯಲು 400 ಪೊಲೀಸ್ ಸಿಬ್ಬಂದಿಯನ್ನು ಭದ್ರೆಗೆ ನಿಲ್ಲಿಸಿದ್ದೆವು ಎಂದರು.

ಜನವರಿ 30ರ ಹುತಾತ್ಮರ ದಿನಕ್ಕೆ ನಾವು ನ್ಯಾಯ ಸಲ್ಲಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ. ಪಿ. ಮುರುಗೇಶ್ ತಿಳಿಸಿದರು. ಕೆಲವು ದಲಿತರು ಇಲ್ಲಿ ಕೆಲವು ಸೆಲೂನುಗಳು ಈಗಲೂ ನಮ್ಮ ಹೇರ್ ಕಟ್ಟಿಂಗ್ ಮಾಡುವುದಿಲ್ಲ ಎಂದು ದೂರಿದರು.

- Advertisement -

ಹಲವು ಬಾರಿಯ ಶಾಂತಿ ಮಾತುಕತೆಯ ಬಳಿಕ ದಲಿತರ ಆಲಯ ಪ್ರವೇಶ ನಡೆದರೂ ಅದನ್ನು ವಿರೋಧಿಸಿ ಕೆಲವರು ಪ್ರತಿಭಟನೆಗೆ ಮುಂದಾದರು.

ಒಬ್ಬರಂತೂ ದಲಿತರು ದೇವಾಲಯದೊಳಕ್ಕೆ ಬಂದುದರಿಂದ ಅದು ಅಶುದ್ಧವಾಯಿತು. ಇನ್ನು ಶುದ್ಧೀಕರಣದ ಬಳಿಕವೇ ಪೂಜೆ ನಡೆಸಬೇಕು ಎಂದು ತಕರಾರು ತೆಗೆದರು.



Join Whatsapp