ಪಟಾಕಿ ಅಂಗಡಿಗೆ ಬೆಂಕಿ: ಇಬ್ಬರು ಸಜೀವ ದಹನ

Prasthutha|


ಅಮರಾವತಿ: ಪಟಾಕಿ ಅಂಗಡಿಗೆ ಬೆಂಕಿ ತಗುಲಿ ಇಬ್ಬರು ಸಜೀವ ದಹನಗೊಂಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

- Advertisement -

ವಿಜಯವಾಡದ ನಿವಾಸಿಗಳಾದ ಕಾಶಿ ಮತ್ತು ಸಾಂಬಾ ಮೃತರು ಎಂದು ಗುರುತಿಸಲಾಗಿದೆ.

ನಗರದ ಗಾಂಧಿನಗರದ ಜಿಮಖಾನಾ ಮೈದಾನದಲ್ಲಿ ವ್ಯಾಪಾರಿಗಳು ಪಟಾಕಿ ಅಂಗಡಿಗಳನ್ನು ಸ್ಥಾಪಿಸುತ್ತಿದ್ದ ಸಂದರ್ಭ ದುರ್ಘಟನೆ ನಡೆದಿದೆ.

- Advertisement -

ಸ್ಥಳದಲ್ಲಿದ್ದ 19 ಅಂಗಡಿಗಳ ಪೈಕಿ 3 ಅಂಗಡಿಗಳು ಸಂಪೂರ್ಣ ಸುಟ್ಟು ಹೋಗಿವೆ. ಇನ್ನೊಂದು ಅಂಗಡಿ ಭಾಗಶಃ ಸುಟ್ಟು ಹೋಗಿದೆ. ಭಾರೀ ಸ್ಫೋಟ ಸಂಭವಿಸಿದ್ದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.

Join Whatsapp