ಒಳಚರಂಡಿ ಸ್ವಚ್ಛಕ್ಕೆ ಇಳಿದ ಇಬ್ಬರು ಕಾರ್ಮಿಕರ ದುರ್ಮರಣ | ಗುತ್ತಿಗೆದಾರನ ವಿರುದ್ಧ ಪ್ರಕರಣ

Prasthutha|

ಸೂರತ್ : ಇಲ್ಲಿನ ನನ್ ಪುರ ಪ್ರದೇಶದಲ್ಲಿ ಒಳಚರಂಡಿ ಸ್ವಚ್ಛಕ್ಕೆ ಇಳಿದ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದಾರೆ. ಒಳಚರಂಡಿಯೊಳಗಿನ ವಿಷಕಾರಿ ಅನಿಲದಿಂದಾಗಿ ಉಸಿರುಗಟ್ಟಿ ಇವರ ಸಾವು ಸಂಭವಿಸಿದೆ. ಸಂಬಂಧಪಟ್ಟ ಗುತ್ತಿಗೆದಾರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೃತಪಟ್ಟವರನ್ನು ಮೊನ್ ಸಿಂಗ್ ಅಮಾಲಿಯ (52) ಮತ್ತು ಜಯೇಂದ್ರ ಅಮೇಲಿಯ (25) ಎಂದು ಗುರುತಿಸಲಾಗಿದೆ. ಇಬ್ಬರೂ ಸೂರತ್ ನ ಜಹಾಂಗೀರ್ ಪುರ ಮತ್ತು ದಹೋಡ್ ನ ನಿವಾಸಿಗಳಾಗಿದ್ದಾರೆ.

- Advertisement -

ನನ್ ಪುರ ಪ್ರದೇಶದ ಮಚ್ಚಿವಾಡ್ ವೃತ್ತದ ಬಳಿ ಒಳಚರಂಡಿ ಸ್ವಚ್ಛಗೊಳಿಸಲು ಕಾರ್ಮಿಕರನ್ನು ಇಳಿಸಲಾಗಿತ್ತು. ಇಬ್ಬರು ಕಾರ್ಮಿಕರು ಒಳಚರಂಡಿಯೊಳಗೆ ಪ್ರಜ್ಞೆ ಕಳೆದುಕೊಂಡಿದ್ದರು. ವಿಷಯ ಗುತ್ತಿಗೆದಾರ ಜೋಗರಾಮ್ ಸೇನ್ ಗೆ ತಿಳಿಸಲಾಯಿತು. ಆತ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿ, ಅವರು ಆಗಮಿಸಿ ರಕ್ಷಣಾ ಕಾರ್ಯ ನಡೆಸಿದರಾದರೂ, ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಅವರು ಕೊನೆಯುಸಿರೆಳೆದಿದ್ದರು.

ದೇಶಾದ್ಯಂತ ಮಲ ಹೊರುವ ಪದ್ಧತಿ ನಿಷೇಧದಲ್ಲಿದ್ದರೂ, ದೇಶಕ್ಕೇ ತಮ್ಮ ‘ಗುಜರಾತ್ ಮಾಡೆಲ್’ ಎಂಬ ಸುಳ್ಳಿನ ಸರಮಾಲೆ ಹೆಣೆದು ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ತವರಲ್ಲಿ ಪೌರ ಕಾರ್ಮಿಕರ ಸ್ಥಿತಿ ಎಷ್ಟೊಂದು ದುಸ್ಥಿತಿಯಲ್ಲಿದೆ ಎಂಬುದು ಈ ಘಟನೆಯಿಂದ ತಿಳಿದುಬರುತ್ತದೆ.

- Advertisement -