ಉ.ಪ್ರ. | ಇಬ್ಬರು ದಲಿತ ಬಾಲಕಿಯರ ನಿಗೂಢ ಸಾವು; ಒಬ್ಬಾಕೆ ಚಿಂತಾಜನಕ; ಆಸ್ಪತ್ರೆಗೆ ದಾಖಲು

Prasthutha|

ಉನ್ನಾವೊ : ಉತ್ತರ ಪ್ರದೇಶದ ಉನ್ನಾವೊನಲ್ಲಿ ಮೂವರು ದಲಿತ ಬಾಲಕಿಯರು ತಮ್ಮ ಹೊಲದಲ್ಲಿ ಪ್ರಜ್ಞಾ ಹೀನರಾಗಿ ಪತ್ತೆಯಾಗಿದ್ದು, ಅವರಲ್ಲಿ ಇಬ್ಬರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಬಾಲಕಿಯರ ಸಾವಿಗೆ ವಿಷ ಬಳಕೆಯಾಗಿರುವ ಅಂಶ ಬೆಳಕಿಗೆ ಬಂದಿದೆ. ಬಾಲಕಿಯರನ್ನು ಬಟ್ಟೆಯಲ್ಲಿ ಕಟ್ಟಲಾಗಿತ್ತು ಎಂದೂ ಹೇಳಲಾಗಿದೆ. ಜೀವಂತವಿರುವ ಹುಡುಗಿ ಜೀವನ್ಮರಣ ಸ್ಥಿತಿಯಲ್ಲಿದ್ದಾಳೆ ಎಂದು ವರದಿಯಾಗಿದೆ.

- Advertisement -

ದನಗಳಿಗೆ ಮೇವು ತರಲು ಹೋಗಿದ್ದ 17, 16, 13 ಸೋದರ ಸಂಬಂಧಿ ಹುಡುಗಿಯರು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಮನೆಯವರು ಹುಡುಕಲಾರಂಭಿಸಿದಾಗ, ಅವರು ತಮ್ಮದೇ ಹೊಲದಲ್ಲಿ ಅಸ್ವಸ್ಥರಾಗಿ ಬಿದ್ದಿರುವುದು ಪತ್ತೆಯಾಗಿತ್ತು.

ಬಾಲಕಿಯರಿಗೆ ವಿಷ ಪ್ರಾಶಣವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅಸ್ವಸ್ಥಳಾಗಿರುವ ಯುವತಿ ಎಚ್ಚರಗೊಂಡಲ್ಲಿ ಏನಾಯಿತು ಎಂಬುದನ್ನು ತಿಳಿದುಕೊಳ್ಳಬಹುದು. ಚಿಕ್ಕವರಿಬ್ಬರು ಸಾವಿಗೀಡಾಗಿದ್ದು, ದೊಡ್ಡವಳು ಜೀವನ್ಮರಣ ಸ್ಥಿತಿಯಲ್ಲಿದ್ದಾಳೆ.

- Advertisement -

ತಮ್ಮ ಮೇಲೆ ಯಾರಿಗೂ ದ್ವೇಷವಿಲ್ಲದ ಕಾರಣ, ತಾವು ಈ ಬಗ್ಗೆ ಯಾರ ಮೇಲೂ ಅನುಮಾನ ಪಡಲಾಗುವುದಿಲ್ಲ ಎಂದು ಬಾಲಕಿಯರ ಕುಟುಂಬಸ್ಥರು ಹೇಳಿದ್ದಾರೆ.  



Join Whatsapp