ಎರಡು ಅಂತಸ್ತಿನ ಕಟ್ಟಡ ಕುಸಿತ: ನವಜಾತ ಶಿಶು ಸೇರಿ ಇಬ್ಬರು ಸಾವು

Prasthutha|

- Advertisement -

ಭೀವಂಡಿ: ಎರಡು ಅಂತಸ್ತಿನ ಕಟ್ಟಡ ಕುಸಿದು ನವಜಾತ ಶಿಶು ಸೇರಿ ಇಬ್ಬರು ಮೃತಪಟ್ಟಿರುವ ಘಟನೆ‌ ಮಹಾರಾಷ್ಟ್ರದ ಭೀವಂಡಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಅಪಘಾತದಲ್ಲಿ ಇತರ ಐವರು ಗಾಯಗೊಂಡಿದ್ದಾರೆ.

- Advertisement -

ಮೃತರನ್ನು ಉಜ್ಮಾ ಅತೀಫ್ ಮೊಮಿನ್ (40) ಮತ್ತು ತಸ್ಲಿಮಾ ಮೊಸರ್ ಮೊಮಿನ್ (8 ತಿಂಗಳು) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ನಾಲ್ವರು ಮಹಿಳೆಯರು ಮತ್ತು 65 ವರ್ಷದ ಪುರುಷ ಸೇರಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಭಿವಂಡಿ ನಗರದ ಧೋಬಿ ತಲಾಬ್ ಪ್ರದೇಶದ ದುರ್ಗಾ ರಸ್ತೆಯಲ್ಲಿರುವ ಆರು ಫ್ಲಾಟ್ ಕಟ್ಟಡವು ಮಧ್ಯರಾತ್ರಿ 12.35 ಕ್ಕೆ ಕುಸಿದಿದೆ.