ಮುಂಬೈನಿಂದ ಮಂಗಳೂರು‌ ಕಡೆಗೆ ಹೊರಟಿದ್ದ ಬಸ್ಸಿನಲ್ಲಿ ದಾಖಲೆ ಇಲ್ಲದ 2 ಕೋಟಿ ರೂ. ನಗದು ಹಣ ಪತ್ತೆ!

Prasthutha|

ಬೆಳಗಾವಿ: ಮುಂಬೈನಿಂದ ಮಂಗಳೂರು‌ ಕಡೆಗೆ ಹೊರಟಿದ್ದ ಬಸ್ಸಿನಲ್ಲಿ ದಾಖಲೆ ಇಲ್ಲದ 2 ಕೋಟಿ ರೂ. ನಗದು ಹಣ ಪತ್ತೆಯಾಗಿರುವುದಾಗಿ ವರದಿಯಾಗಿದೆ.

- Advertisement -

ಮುಂಬೈನಿಂದ ಮಂಗಳೂರು ಕಡೆಗೆ ಹೊರಟಿದ್ದ ಕೆನರಾ ಪಿಂಟೊ ಟ್ರಾವೆಲ್ಸ್ ಎಂಬ ಖಾಸಗಿ ಬಸ್ ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2 ಕೋಟಿ ರೂ.‌ ನಗದು ಹಣವನ್ನು ಹಿರೇಬಾಗೇವಾಡಿ ಟೋಲ್ ಗೇಟ್ ಬಳಿ ಬುಧವಾರ ನಸುಕಿನ ಜಾವ 3:30 ರ ಸುಮಾರಿಗೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹಿರೇಬಾಗೇವಾಡಿ ಟೋಲ್ ಗೇಟ್ ಬಳಿ ಚೆಕ್ ಪೋಸ್ಟ್ ಹಾಕಲಾಗಿದ್ದು, ಬಸ್ ತಪಾಸಣೆ ವೇಳೆ ಎರಡು ಕೋಟಿ ರೂ ನಗದು ಹಣ ಪತ್ತೆಯಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ ನಿತೇಶ್ ಪಾಟೀಲ್ ಹಾಗೂ ಡಿಸಿಪಿ ಪಿವಿ ಸ್ನೇಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.

- Advertisement -

ಎಫ್‌ಎಸ್ ಟಿ ತಂಡದ ಮುಖ್ಯಸ್ಥ ಶಂಭುಲಿಂಗಪ್ಪ, ರಾಜೇಶ ಮೊರಬದ, ಎಸಿಪಿ ಗೋಪಾಲಕೃಷ್ಣ ಗೌಡರ, ರಾಜಶೇಖರ ಡಂಬಳ,‌ ಹಿರೇಬಾಗೇವಾಡಿ ಇನ್ಸ್ಪೆಕ್ಟರ್ ಅಮರೇಶ ಸೇರಿದಂತೆ ಹಿರೇಬಾಗೇವಾಡಿ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Join Whatsapp