1984ರ ಸಿಖ್ ವಿರೋಧಿ ಗಲಭೆ: ದನಿ ಮಾದರಿ ನೀಡಲು ಸಿಬಿಐ ಎದುರು ಹಾಜರಾದ ಜಗದೀಶ್ ಟೈಟ್ಲರ್

Prasthutha|

ನವದೆಹಲಿ: ದಿಲ್ಲಿಯ ಪುಲ್ ಬಂಗಾಶ್ ಪ್ರದೇಶದಲ್ಲಿ 1984ರಲ್ಲಿ ನಡೆದ ಸಿಖ್ ಗಲಭೆ ಸಂಬಂಧ ಮಂಗಳವಾರ ಸಿಬಿಐ ಸಮನ್ಸ್ ಮೇಲೆ ಹಾಜರಾದ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರು ತಮ್ಮ ಧ್ವನಿ ಮಾದರಿ ನೀಡಿದರು.

- Advertisement -


ಅವರು ಫೋರೆನ್ಸಿಕ್ ಪ್ರಯೋಗ ಶಾಲೆಯಲ್ಲಿ ಧ್ವನಿ ಪರೀಕ್ಷೆಗೆ ಒಳಗಾದರು.
39 ವರ್ಷ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಸಾಕ್ಷಿ ದೊರೆತಿದ್ದು ಅದಕ್ಕೆ ಟೈಟ್ಲರ್ ರ ದನಿ ಪರೀಕ್ಷೆ ಅಗತ್ಯದ್ದಾಗಿತ್ತು ಎಂದು ಸಿಬಿಐ ಹೇಳಿದೆ.
ಪುಲ್ ಬಂಗಾಶ್ ಪ್ರದೇಶದಲ್ಲಿ ಆ ಗಲಭೆಯಲ್ಲಿ ಹಲವು ಸಿಖ್ಖರನ್ನು ಹತ್ಯೆ ಮಾಡಲಾಗಿತ್ತು.


1984ರಲ್ಲಿ ಅವರದೇ ಅಂಗರಕ್ಷಕರಾದ ಸಿಖ್ ಭದ್ರತಾ ಸಿಬ್ಬಂದಿಯಿಂದ ಪ್ರಧಾನಿ ಇಂದಿರಾ ಗಾಂಧಿಯವರ ಕೊಲೆ ಆದಾಗ ಸಿಖ್ ವಿರುದ್ಧ ಹಿಂಸಾತ್ಮಕ ದಾಳಿಗಳು ನಡೆದಿದ್ದವು.



Join Whatsapp