ನಾಗ್ಪುರ: ಭಾರತ ಸಂವಿಧಾನದ ಪಿತಾಮಹ ಡಾ. ಬಿ.ಆರ್. ಅಂಬೇಡ್ಕರ್ ಅವರು 85 ವರ್ಷಗಳ ಹಿಂದೆಯೇ ಮಹಾರಾಷ್ಟ್ರದ ಆರ್.ಎಸ್.ಎಸ್. ಶಾಖೆಯೊಂದಕ್ಕೆ ಭೇಟಿ ನೀಡಿದ್ದರು ಎಂದು ಸಂಘದ ಸಂವಹನ ವಿಭಾಗ ಗುರುವಾರ ಹೇಳಿದೆ.
ಭೇಟಿ ಸಂದರ್ಭದಲ್ಲಿ ಕೆಲವು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಆರ್ಎಸ್ಎಸ್ ಅನ್ನು ತಾನು ಆತ್ಮೀಯತೆಯ ಭಾವನೆಯಿಂದ ನೋಡಿದ್ದೇನೆ ಎಂದು ಅಂಬೇಡ್ಕರ್ ಹೇಳಿದ್ದರು ಎಂದು RSS ಸಂವಹನ ವಿಭಾಗವಾದ ವಿದರ್ಭ ಪ್ರಾಂತ್ಯದ ವಿಶ್ವ ಸಂವಾದ ಕೇಂದ್ರ ಗುರುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ಡಾ. ಅಂಬೇಡ್ಕರ್ ಅವರು ಜನವರಿ 2, 1940 ರಂದು ಸತಾರಾ ಜಿಲ್ಲೆಯ ಕರಾಡ್ ನಲ್ಲಿರುವ ಆರ್ ಎಸ್ ಎಸ್ ‘ಶಾಖಾ’ ಕಚೇರಿಗೆ ಭೇಟಿ ನೀಡಿದ್ದ ಅಂಬೇಡ್ಕರ್, ಅಲ್ಲಿನ ಸ್ವಯಂ ಸೇವಕರನ್ನುದ್ದೇಶಿಸಿ ಮಾತನಾಡಿದ್ದರು. ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಸಂಘವನ್ನು ಆತ್ಮೀಯತೆಯ ಭಾವನೆಯಿಂದ ನೋಡುತ್ತೇನೆ ಎಂದು ಹೇಳಿದ್ದರು.
‘ಕೆಲವೊಂದು ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ನಾನು ಆರ್.ಎಸ್.ಎಸ್ ಅನ್ನು ಆತ್ಮೀಯ ಭಾವನೆಯಿಂದ ಕಾಣುತ್ತೇನೆ’ ಎಂದು ಅಂಬೇಡ್ಕರ್ ಅವರು ಭಾಷಣದಲ್ಲಿ ಹೇಳಿದ್ದರು ಎಂದು ಟಿಪ್ಪಣಿಯಲ್ಲಿ ಉಲ್ಲೇಖ ಇದೆ.
1940 ಜನವರಿ 9ರ ಪುಣೆ ಮೂಲದ ಮರಾಠಿ ದಿನ ಪತ್ರಿಕೆ ‘ಕೇಸರಿ’, ಅಂಬೇಡ್ಕರ್ ಅವರ ಶಾಖೆ ಭೇಟಿಯ ಬಗ್ಗೆ ವರದಿ ಮಾಡಿತ್ತು ಎಂದು ಟಿಪ್ಪಣಿ ಹೇಳಿದೆ. ಅಲ್ಲದೆ ಪತ್ರಿಕೆಯ ವರದಿಯ ತುಣುಕನ್ನೂ ಲಗತ್ತಿಸಲಾಗಿದೆ.
1940ರಲ್ಲಿ ಡಾ. ಅಂಬೇಡ್ಕರ್ ನಮ್ಮ ಶಾಖೆಗೆ ಭೇಟಿ ನೀಡಿದ್ದರು: RSS
Prasthutha|