ಬೆಂಗಳೂರು: ’19 ಲಕ್ಷ EVM ಯಂತ್ರಗಳು ನಾಪತ್ತೆಯಾಗಿವೆ’ ಎಂದು ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ್ ಆರೋಪಿಸಿದ್ದಾರೆ.
ಚುನಾವಣೆ ಸುಧಾರಣೆಗಳ ಬಗ್ಗೆ ವಿಧಾನಸಭೆಯಲ್ಲಿ ನಡೆದ ವಿಶೇಷ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಎಚ್.ಕೆ. ಪಾಟೀಲ್ ಅವರು, “2016ರಲ್ಲಿ ಬಿಇಎಲ್‌ನಿಂದ 9.64 ಲಕ್ಷ ಇವಿಎಂ, ಇಸಿಐಎಲ್ ನಿಂದ 9.27 ಲಕ್ಷ ಇವಿಎಂ ಮತ್ತು 2019ರಲ್ಲಿ ಬಿಇಎಲ್‌ನಿಂದ 62000 ಇವಿಎಂ ಪೂರೈಕೆಯಾಗಿವೆ. ಆದರೆ, ಚುನಾವಣಾ ಆಯೋಗಕ್ಕೆ ಈ ಬಗ್ಗೆ ಮಾಹಿತಿ ಇಲ್ಲ. ಇವು ಎಲ್ಲಿಗೆ ಪೂರೈಕೆ ಆಗಿವೆ ಎಂಬ ಮಾಹಿತಿ ಯಾರಿಗೂ ಇಲ್ಲ. ಈಗಾಗಲೇ ಇವಿಎಂ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಚುನಾವಣಾ ಆಯೋಗದ ಅಧಿಕಾರಿಗಳನ್ನು ಸದನಕ್ಕೆ ಕರೆಸಿ ಮಾಹಿತಿ ಪಡೆಯಬೇಕು. ನಾನು ಹೇಳಿದ್ದು ಸುಳ್ಳು ಎಂದಾದರೆ ಯಾವುದೇ ಶಿಕ್ಷೆಗೂ ಸಿದ್ಧ” ಎಂದು ಹೇಳಿದರು.
ವಿಷಯದ ಗಂಭೀರತೆ ಅರಿತು ಪ್ರತಿಕ್ರಿಯಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ‘ನಿಮ್ಮ ಬಳಿ ಇರುವ ಮಾಹಿತಿ ಕೊಡಿ. ಆಯೋಗದಿಂದ ವಿವರಣೆ ಪಡೆಯಲು ನನ್ನ ಕಾರ್ಯ ವ್ಯಾಪ್ತಿಯಲ್ಲಿ ಸೂಚಿಸುತ್ತೇನೆ’ ಎಂದು ತಿಳಿಸಿದರು.