ವಡೋದರಾ: ದೀಪಾವಳಿಯಂದು ಗುಜರಾತ್ ನ ವಡೋದರಾ ನಗರದ ಪ್ರದೇಶವೊಂದರಲ್ಲಿ ಪಟಾಕಿ ಸಿಡಿಸಿದ್ದಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯಗಳ ಸದಸ್ಯರ ನಡುವೆ ಘರ್ಷಣೆ ನಡೆದಿದ್ದು, ಪೊಲೀಸರು ಎರಡು ಕಡೆಯ 19 ಜನರನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಪಟಾಕಿಗಳನ್ನು ಸಿಡಿಸುವಾಗ ಮೋಟಾರ್ ಸೈಕಲ್ ಗೆ ರಾಕೆಟ್ ಪಟಾಕಿ ಬಿದ್ದು ಬೆಂಕಿಗಾಹುತಿಯಾದ್ದರಿಂದ ಎರಡು ಸಮುದಾಯಗಳ ಜನರು ಪರಸ್ಪರ ಕಲ್ಲು ತೂರಾಟ ನಡೆಸಿ ಘರ್ಷಣೆ ನಡೆಸಿದರು ಎಂದು ವಡೋದರಾ ಉಪ ಪೊಲೀಸ್ ಆಯುಕ್ತ ಯಶ್ಪಾಲ್ ಜಗನಿಯಾ ಹೇಳಿದರು.
ಈ ಘರ್ಷಣೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಘಟನೆಯ ನಂತರ, ಈ ಪ್ರದೇಶದಲ್ಲಿ ಭದ್ರತೆಯನ್ನು ನಿಯೋಜಿಸಲಾಗಿದೆ ಮತ್ತು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಎರಡೂ ಸಮುದಾಯಗಳ ಶಂಕಿತರನ್ನು ಬಂಧಿಸಲಾಗುತ್ತಿದೆ ಎಂದು ಅವರು ಹೇಳಿದರು.