ಜೈಲಿನಲ್ಲಿದ್ದ ದೆಹಲಿಯ ಮುಸ್ಲಿಮ್ ಯುವಕನ ಸಂಶಯಾಸ್ಪದ ಸಾವು । ಪೊಲೀಸರ ವ್ಯವಸ್ಥಿತ ಕೊಲೆಯೆಂದ ಕುಟುಂಬ

Prasthutha|

ಲಕ್ನೋ: ದೆಹಲಿಯಲ್ಲಿ ಮುಸ್ಲಿಮ್ ಯುವಕನ ಕಸ್ಟಡಿ ಸಾವು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಫೆಬ್ರವರಿ 14 ರಂದು ಬೆಳಗ್ಗೆ ಸುಮಾರು 7 ಗಂಟೆಗೆ ಅಯ್ಯೂಬ್ ಮಲಿಕ್ ಎಂಬವರಿಗೆ ಹರಿನಗರ ಪೊಲೀಸ್ ಠಾಣೆಯ ಎ.ಎಸ್.ಐ ನಿರಂಜನ್ ಕುಮಾರ್ ಕರೆ ಮಾಡಿ ‘ನಿಮ್ಮ ಸಹೋದರ ಝಿಶಾನ್ ಮಲಿಕ್ ಅಸ್ವಸ್ಥರಾಗಿದ್ದು, ದೀನ್ ದಯಾಳ್ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ತಕ್ಷಣ ಆಸ್ಪತ್ರೆಗೆ ಭೇಟಿ ನೀಡುವಂತೆ ಸೂಚಿಸಿದ್ದಾರೆ.

- Advertisement -

ಪೊಲೀಸರ ಮಾಹಿತಿಯನ್ನು ಆಧರಿಸಿ ಝಿಶಾನ್ ಮಲಿಕ್ ಅವರ ತಂದೆ, ತಾಯಿ ಮತ್ತು ಸಹೋದರಿ ತಕ್ಷಣ ಆಸ್ಪತ್ರೆಗೆ ಧಾವಿಸಿದಾಗ, ನಿಮ್ಮ ಮಗ ಝಿಶಾನ್ ಮಲಿಕ್ ನಿಧನರಾಗಿದ್ದಾರೆ’ ಎಂದು ಆಸ್ಪತ್ರೆಯವರು ತಿಳಿಸುತ್ತಾರೆ.

ಕಳೆದ ನವೆಂಬರ್ ನಲ್ಲಿ ಝಿಶಾನ್ ಮಲಿಕ್ ಅವರನ್ನು ಸಿಗರೇಟ್ ಕಳ್ಳತನದ ಆರೋಪದಲ್ಲಿ ಪೊಲೀಸರು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಿದ್ದರು. ಮೃತ ಝಿಶಾನ್ ನ ದೇಹದ ಮೇಲೆ ಗಾಯದ ಕಲೆಗಳಿದ್ದು, ಹಲವು ಮೂಳೆಗಳು ಮುರಿದಿವೆ. ಪೊಲೀಸರು ಝಿಶಾನ್ ಮಲಿಕ್ ಅವರನ್ನು ವ್ಯವಸ್ಥಿತವಾಗಿ ಕೊಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಕುಟುಂಬದವರು ಆರೋಪಿಸಿದ್ದಾರೆ. ಈ ಆರೋಪವನ್ನು ನಿರಾಕರಿಸಿರುವ ಪೊಲೀಸ್ ಅಧಿಕಾರಿಗಳು, ಮಲಿಕ್ ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

- Advertisement -

ಈ ಮಧ್ಯೆ ಝಿಶಾನ್ ವಿರುದ್ಧ ದಾಖಲಾದ ಎಫ್.ಐ.ಆರ್ ಪ್ರತಿ ಅಥವಾ ಜೈಲಿನ ವರ್ಗಾವಣೆ ಪತ್ರಗಳನ್ನು ನೀಡಿಲ್ಲ ಎಂದು ಕುಟುಂಬದ ಮೂಲಗಳು ಆರೋಪಿಸಿವೆ.

ಸದ್ಯ ಮೃತ ಝಿಶಾನ್ ಮಲಿಕ್ ಅವರು ತಂದೆ, ತಾಯಿ, ಇಬ್ಬರು ಅಂಗವಿಕಲ ಸಹೋದರರು ಮತ್ತು ಮೂವರು ಸಹೋದರಿಯರನ್ನು ಅಗಲಿದ್ದಾರೆ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಝಿಶಾನ್ ಕುಟುಂಬ ಸಿಬಿಐ ತನಿಖೆ ಒತ್ತಾಯಿಸಿದೆ.

Join Whatsapp