ಸಿಡಿಲು ಬಡಿದು 18 ಮಂದಿ ಮೃತ್ಯು

Prasthutha|

ಪಾಟ್ನಾ: ಕಳೆದ 24ಗಂಟೆಯಲ್ಲಿ ಧಾರಾಕಾರ ಮಳೆ ಹಾಗೂ ಸಿಡಿಲು ಬಡಿದು 18 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.

- Advertisement -


ರೋಹ್ಟಾಸ್ ಜಿಲ್ಲೆಯಲ್ಲಿ ಐವರು, ಅರ್ವಾಲ್ ನಲ್ಲಿ ನಾಲ್ವರು, ಸರಾನ್ ನಲ್ಲಿ ಮೂವರು, ಔರಂಗಾಬಾದ್ ನಲ್ಲಿ ಇಬ್ಬರು ಹಾಗೂ ಚಂಪಾರಣ್ ನಲ್ಲಿ ಇಬ್ಬರು, ಬಂಕಾದಲ್ಲಿ ಒಬ್ಬರು ವೈಶಾಲಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.


ಸಿಡಿಲು ಬಡಿದು ಕೊನೆಯುಸಿರೆಳೆದಿರುವ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.