ಭಾರತೀಯ ಸಂಸ್ಥೆ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ 18 ಮಕ್ಕಳು ಸಾವು: ಗ್ಯಾಂಬಿಯಾ ಬಳಿಕ ಉಜ್ಬೆಕಿಸ್ತಾನ ಆರೋಪ

Prasthutha|

ನವದೆಹಲಿ: ಕಳೆದ ಕೆಲ ತಿಂಗಳ ಹಿಂದೆ ಗ್ಯಾಂಬಿಯಾ ದೇಶದ ಸುಮಾರು 70 ಮಕ್ಕಳ ಸಾವಿಗೆ ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಉಜ್ಬೆಕಿಸ್ತಾನವೂ ಭಾರತೀಯ ಸಂಸ್ಥೆ ತಯಾರಿಸಿದ ಸಿರಪ್ ಅನ್ನು ಸೇವಿಸಿದ ನಂತರ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದೆ.

- Advertisement -

ನೋಯ್ಡಾ ಮೂಲದ ಭಾರತೀಯ ಕಂಪನಿ ಮರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ತಯಾರಿಸಿದ ಡಾಕ್ -1 ಮ್ಯಾಕ್ಸ್ ಕೆಮ್ಮಿನ ಸಿರಪ್ ತೆಗೆದುಕೊಂಡ ಪರಿಣಾಮವಾಗಿ ತೀವ್ರ ಉಸಿರಾಟದ ಕಾಯಿಲೆಯಿಂದ ಬಳಲುತ್ತಿರುವ 21 ಮಕ್ಕಳಲ್ಲಿ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಜ್ಬೆಕಿಸ್ತಾನದ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಮೃತ ಮಕ್ಕಳು, ಆಸ್ಪತ್ರೆಗೆ ದಾಖಲಾಗುವ ಮೊದಲು, ಈ ಔಷಧಿಯನ್ನು ಮನೆಯಲ್ಲಿ 2-7 ದಿನಗಳವರೆಗೆ ದಿನಕ್ಕೆ 3,4 ಬಾರಿ, 2.5-5 ಮಿ.ಲೀ. ನಷ್ಟು ತೆಗೆದುಕೊಂಡಿದ್ದರು. ಸಿರಪ್ ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ ಎಥಿಲೀನ್ ಗ್ಲೈಕೋಲ್ ಎಂಬ ವಿಷಕಾರಿ ಅಂಶ ಪತ್ತೆಯಾಗಿದೆ. ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳದೇ ಪೋಷಕರು ಮಕ್ಕಳಿಗೆ ಕೆಮ್ಮಿನ ಸಿರಪ್ ಅನ್ನು ಅಗತ್ಯ ಪ್ರಮಾಣಕ್ಕಿಂತಲೂ ಹೆಚ್ಚಿನ ಡೋಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ಇದೀಗ 18 ಮಕ್ಕಳ ಸಾವಿನ ಬಳಿಕ ದೇಶದ ಎಲ್ಲಾ ಔಷಧಾಲಯಗಳಿಂದ ಡಾಕ್-1 ಮ್ಯಾಕ್ಸ್ ಮಾತ್ರೆಗಳು ಹಾಗೂ ಸಿರಪ್‌ಗಳನ್ನು ಹಿಂಪಡೆಯಲಾಗಿದೆ.

ಈ ಕುರಿತು ಭಾರತವೂ ತನಿಖೆಯನ್ನು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

Join Whatsapp