ಮೆಕ್ಸಿಕೋ: ಮೆಕ್ಸಿಕೋದಲ್ಲಿ ಲೀಗ್ ಹಂತದ ಫುಟ್ಬಾಲ್ ಪಂದ್ಯಾಟದ ವೇಳೆ ನಡೆದ ಘರ್ಷಣೆಯಲ್ಲಿ ರಕ್ತದೋಕುಳಿ ಹರಿದಿದ್ದು, 17 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿವೆ.
ಉಭಯ ತಂಡಗಳ ಅಭಿಮಾನಿಗಳಿಂದ ಪ್ರಾರಂಭವಾದ ಘರ್ಷಣೆಗೆ 17 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಅತಿಥೇಯ ಕ್ವೆರೆಟಾರೊ ಮತ್ತು ಅಟ್ಲಾಸ್ ತಂಡಗಳ ಅಭಿಮಾನಿಗಳ ನಡುವಿನ ಘರ್ಷಣೆಗೆ ಕನಿಷ್ಠ 17 ಮಂದಿ ಸಾವನ್ನಪ್ಪಿ, 22 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂದ್ಯಾಟದ 62ನೇ ನಿಮಿಷದಲ್ಲಿ ಅಟ್ಲಾಸ್ ತಂಡದ ಅಭಿಮಾನಿಗಳು ಪ್ರತಿಸ್ಪರ್ಧಿ ಬೆಂಬಲಿಗರ ಜೆರ್ಸಿಗಳನ್ನು ಹರಿದು ಹಾಕಿರುವುದನ್ನೇ ನೆಪವಾಗಿಟ್ಟು ಪ್ರಾರಂಭವಾದ ಘರ್ಷಣೆಯಿಂದಾಗಿ ಪಂದ್ಯಾಟವನ್ನು ಸ್ಥಗಿತಗೊಳಿಸಲಾಗಿತ್ತು.
ಘಟನೆಯ ಕುರಿತು ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದ ಲೀಗ್ ಅಧಿಕಾರಿಗಳು, ಈ ಹಿಂಸಾತ್ಮಕ ಘರ್ಷಣೆಯನ್ನು ಖಂಡಿಸಿದ್ದಾರೆ ಮತ್ತು ಕ್ರೀಡಾಂಗಣದಲ್ಲಿನ ಭದ್ರತಾ ಕೊರತೆಯೇ ಈ ಘರ್ಷಣೆಗೆ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.