5 ವರ್ಷಗಳಲ್ಲಿ 166 ಮಂದಿಯನ್ನು ಪೊಲೀಸರು ಹತ್ಯೆ ಮಾಡಿದ್ದಾರೆ: ಆದಿತ್ಯನಾಥ್

Prasthutha|

ಲಕ್ನೋ: 2017 ರಿಂದ ಇಲ್ಲಿಯ ವರೆಗೆ ಕಳೆದ 5 ವರ್ಷಗಳಲ್ಲಿ 166 ಮಂದಿಯನ್ನು ಪೊಲೀಸರು ಎನ್ಕೌಂಟರ್ ಮೂಲಕ ಹತ್ಯೆ ಮಾಡಿದ್ದಾರೆ ಮತ್ತು 4453 ಮಂದಿ ಗಾಯಗೊಂಡಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ತಿಳಿಸಿದ್ದಾರೆ.

- Advertisement -

ಲಕ್ನೋದಲ್ಲಿ ಆಯೋಜಿಸಲಾದ ಪೊಲೀಸ್ ಸ್ಮಾರಕ ದಿನದ ಪರೇಡ್ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಹೆಚ್ಚಾಗಿ ದಲಿತ, ಮುಸ್ಲಿಮ್ ಮತ್ತು ಒಬಿಸಿ ಸಮುದಾಯಗಳನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಲಾಗಿದೆ ಮತ್ತು ಕೊಲ್ಲಲಾಗಿದೆ ಎಂದು ವಿಮರ್ಶಕರು ಮತ್ತು ಮಾನವ ಹಕ್ಕುಗಳ ಪರ ಸಂಸ್ಥೆಗಳು ಆರೋಪಿಸಿವೆ. 2017 – 2020ರ ಮಧ್ಯೆ ಉತ್ತರ ಪ್ರದೇಶದಲ್ಲಿ ಪೊಲೀಸ್ ಎನ್ಕೌಂಟರ್ ನಿಂದ ಕೊಲ್ಲಲ್ಪಟ್ಟವರಲ್ಲಿ ಶೇಕಡಾ 37 ರಷ್ಟು ಮಂದಿ ಮುಸ್ಲಿಮರು ಎಂಬುದು ವಿಶೇಷ.

- Advertisement -

ಇದು ಅಪರಾಧದ ವಿರುದ್ಧ ತಮ್ಮ ಸರ್ಕಾರ ಶೂನ್ಯ ಸಹಿಷ್ಣತೆಯ ಫಲಿತಾಂಶವಾಗಿದೆ ಎಂದ ಆದಿತ್ಯನಾಥ್, ರಾಜ್ಯದಲ್ಲಿರುವ ಯಾವುದೇ ಅಪರಾಧಿಗಳಿಗೆ ಮುಕ್ತವಾಗಿ ಓಡಾಡಲು ಅವಕಾಶ ನೀಡದೆ ಒಂದೋ ಜೈಲಿನಲ್ಲಿಡಲಾಗುತ್ತದೆ ಅಥವಾ ಕೊಲ್ಲಲ್ಪಡುತ್ತಿದ್ದಾರೆ ಎಂದು ತಿಳಿಸಿದರು.

ಕಳೆದ ಐದು ವರ್ಷಗಳಲ್ಲಿ 13 ಪೊಲೀಸ್ ಸಿಬ್ಬಂದಿಯೂ ಸಾವನ್ನಪ್ಪಿದ್ದಾರೆ ಮತ್ತು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಆದಿತ್ಯನಾಥ್ ತಿಳಿಸಿದರು. ಸರ್ಕಾರವು ಯಾವಾಗಲೂ ಹುತಾತ್ಮರಾದ ಪೊಲೀಸರು ಕುಟುಂಬಗಳ ಕಲ್ಯಾಣ ಮತ್ತು ಅವರ ಎಲ್ಲಾ ಅಗತ್ಯಗಳನ್ನು ಪೂರೈಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡುವುದಾಗಿ ಮುಖ್ಯಮಂತ್ರಿ ಆದಿತ್ಯನಾಥ್ ತಿಳಿಸಿದರು.



Join Whatsapp