ನೇಪಾಳದಲ್ಲಿ ನಡೆದ ಇಂಡೋ-ನೇಪಾಳ ಕ್ರೀಡಾಕೂಟದಲ್ಲಿ ಚಿತ್ರಕೂಟ ಶಾಲೆಯ 16ಪದಕ ವಿಜೇತ ಮಕ್ಕಳಿಗೆ ಗೌರವ ಸನ್ಮಾನ

Prasthutha|

ಬೆಂಗಳೂರು: ಚಿತ್ರಕೂಟ ಶಾ ಲೆಯ ಆವರಣದಲ್ಲಿ ಚಿತ್ರಕೂಟ ಶಾಲೆಯ 16 ಮಕ್ಕಳು ಯೂತ್ ಗೇಮ್ಸ್ ಕೌನ್ಸಿಲ್ ,ಯೂತ್ ಇಂಡೋ-ನೇಪಾಳ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ 9 ಚಿನ್ನ ಮತ್ತು 7ಬೆಳ್ಳಿ ಪದಕ ಪ್ರಶಸ್ತಿ ಗೆದ್ದ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದರು.

- Advertisement -

ಚಿತ್ರಕೂಟ ಶಾಲೆಯ ವ್ಯವಸ್ಥಾಪಕರಾದ ಚೈತನ್ಯರವರು ಪ್ರಾಂಶುಪಾಲರಾದ ಜೋಯಿತ ಚಟರ್ಜಿರವರು ಮತ್ತು ದೈಹಿಕ ಶಿಕ್ಷಕರಾದ ರಂಗನಾಥ್,ಕುಮಾರಿ ಸಂಗೀತಾ ರವರು ಪದಕ ವಿಜೇತ ಮಕ್ಕಳಿಗೆ ಸನ್ಮಾನ ಮಾಡಿದರು.

ಅಂತಾರಾಷ್ಟ್ರೀಯ ಯುವ ಕ್ರೀಡಾಕೂಟದಲ್ಲಿ ಚಿತ್ರಕೂಟ ಶಾಲಾ ಮಕ್ಕಳ ಸಾಧನೆ

- Advertisement -

ಯೂತ್ ಗೇಮ್ಸ್ ಕೌನ್ಸಿಲ್ ನ ಎರಡನೇ ಯೂತ್ ಗೇಮ್ಸ್ ಇಂಡೋ ನೇಪಾಲ್ ಅಂತಾರಾಷ್ಟ್ರೀಯ ಸರಣಿಯು 2022ರ ಆಗಸ್ಟ್ 27 ರಿಂದ 29 ರವರೆಗೆ ನೇಪಾಳದ ಪೋಖ್ರದ ದಶರಥ್ ರಂಗಶಾಲಾ ಸ್ಟೇಡಿಯಂನಲ್ಲಿ ನಡೆಯಿತು.

ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನದ ತಂಡಗಳು ಹಾಗೂ ನೇಪಾಳದ ಮೂರು ವಿವಿಧ ರಾಜ್ಯಗಳ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.

ಚಿತ್ರಕೂಟ ಶಾಲೆಯ ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ 14 ಮತ್ತು 16 ವಯಸ್ಸಿನ ವಿಭಾಗಗಳಲ್ಲಿ 800ಮೀ, 1500ಮೀ ಮತ್ತು 3000ಮೀ ಸ್ಪರ್ಧೆಗಳಲ್ಲಿ 9 ಚಿನ್ನ ಮತ್ತು 7 ಬೆಳ್ಳಿಯ ಪದಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. 1500ಮೀ ಮತ್ತು 3000ಮೀ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದರು.

 ನೇಪಾಳ ಅಂತಾರಾಷ್ಟ್ರೀಯ ಕ್ರೀಡಾ ಸರಣಿಯ ಗೆಲುವಿನಲ್ಲಿ ಶಾಲೆಯ ದೈಹಿಕ ಶಿಕ್ಷಕರಾದ ರಂಗನಾಥ್ ಮತ್ತು ಕುಮಾರಿ ಸಂಗೀತಾರವರ ಪರಿಶ್ರಮ ಬಹುಮುಖ್ಯವಾದದು. ವಿದ್ಯಾರ್ಥಿಗಳು ರಾಷ್ಟ್ರವನ್ನು ಪ್ರತಿನಿಧಿಸಿ ತ್ರಿವರ್ಣ ಧ್ವಜವನ್ನು ಎತ್ತಿಹಿಡಿದುದು ಎಲ್ಲರೂ ಹೆಮ್ಮೆ ಪಡುವಂತಹ ಸಂಗತಿಯಾಗಿದೆ.

Join Whatsapp