80 ಕೋಟಿ ಮೌಲ್ಯದ 16 ಕೆಜಿ ಹೆರಾಯಿನ್ ವಶ

Prasthutha|

ಮುಂಬೈ(ಮಹಾರಾಷ್ಟ್ರ): ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಪ್ತಚರ ನಿರ್ದೇಶನಾಲಯ (ಡಿ.ಆರ್.ಐ) ಅಧಿಕಾರಿಗಳು 80 ಕೋಟಿ ರೂ. ಮೌಲ್ಯದ 16 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಒಬ್ಬನನ್ನು ಬಂಧಿಸಿದ್ದಾರೆ.

- Advertisement -

ಬಿನು ಜಾನ್ ಬಂಧಿತ ಆರೋಪಿ. ವಿದೇಶದಿಂದ ಅಕ್ರಮವಾಗಿ ಡ್ರಗ್ಸ್ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಲಗೇಜ್ ಟ್ರಾಲಿಯಲ್ಲಿ ರಹಸ್ಯವಾಗಿ ಅಡಗಿಸಿಟ್ಟ ಡ್ರಗ್ಸ್ ಪತ್ತೆಯಾಗಿದೆ.

ಉತ್ತಮ ಗುಣಮಟ್ಟದ 16 ಕೆಜಿ ಹೆರಾಯಿನ್ ಇದಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 80 ಕೋಟಿ ರೂ ಮೌಲ್ಯವುಳ್ಳದ್ದು ಎಂದು ಅಂದಾಜಿಸಲಾಗಿದೆ. ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

- Advertisement -

ವಿದೇಶಿ ಪ್ರಜೆಯೊಬ್ಬರಿಗೆ ಸೇರಿದ ಹೆರಾಯಿನ್ ಇದಾಗಿದ್ದು, 1 ಸಾವಿರ ಅಮೆರಿಕ ಡಾಲರ್ ಕಮಿಷನ್ ಗಾಗಿ ತಾನು ಇದನ್ನು ಸಾಗಣೆ ಮಾಡುತ್ತಿರುವುದಾಗಿ ಆರೋಪಿ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ. ಇತರೆ ಆರೋಪಿಗಳ ಹೆಸರನ್ನೂ ಸಹ ಬಹಿರಂಗಪಡಿಸಿದ್ದು, ಅವರುಗಳು ಮತ್ತು ಬಂಧಿತ ಜಾನ್ ಈ ಹಿಂದೆ ಭಾರತದಲ್ಲಿ ಮಾದಕವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದನೇ ಎಂಬುದರ ಜಾಡು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.



Join Whatsapp