ಕಂದಕಕ್ಕೆ ಉರುಳಿದ ಬಸ್: ಶಾಲಾ ಮಕ್ಕಳೂ ಸೇರಿ 16 ಮೃತ್ಯು

Prasthutha|

ಕುಲ್ಲು (ಹಿಮಾಚಲ ಪ್ರದೇಶ): ಖಾಸಗಿ ಬಸ್ ವೊಂದು ಕಮರಿಗೆ ಉರುಳಿ ಬಿದ್ದು, ಶಾಲಾ ಮಕ್ಕಳು ಸೇರಿ 16 ಜನರು ಮೃತಪಟ್ಟಿರುವ ಘಟನೆ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ನಡೆದಿದೆ.

- Advertisement -


ಸಾಯಿಂಜ್ ಗೆ ತೆರಳುತ್ತಿದ್ದ ಬಸ್ ಬೆಳಿಗ್ಗೆ 8.30ರ ಸುಮಾರಿಗೆ ಜಂಗ್ಲಾ ಗ್ರಾಮದ ಬಳಿ ಕಮರಿಗೆ ಬಿದ್ದಿದೆ ಎಂದು ಕುಲ್ಲು ಜಿಲ್ಲಾಧಿಕಾರಿ ಅಶುತೋಷ್ ಗರ್ಗ್ ತಿಳಿಸಿದ್ದಾರೆ.


ಜಿಲ್ಲೆಯ ಅಧಿಕಾರಿಗಳು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ಹೇಳಿದರು.

Join Whatsapp