15ನೇ ರಾಷ್ಟ್ರೀಯ ಕನ್ನಡ ಸಂಸ್ಕತಿ ಸಮ್ಮೇಳನ

Prasthutha|

ಬೆಂಗಳೂರು: ಬಸವ ಸಮಿತಿ ಸಭಾಂಗಣದಲ್ಲಿ ಹೃದಯವಾಹಿನಿ ಕರ್ನಾಟಕ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅದಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಂಟಿ ಆಶ್ರಯದಲ್ಲಿ 15ನೇ ರಾಷ್ಟ್ರೀಯ ಕನ್ನಡ ಸಂಸ್ಕತಿ ಸಮ್ಮೇಳನವನ್ನು ಆಯೋಜಿಸಲಾಗಿತ್ತು.

- Advertisement -

ಇದರ ಸಮಾರೋಪ ಸಮಾರಂಭದಲ್ಲಿ ಡಾ. ನೂರ್ ಸಮದ್ ಅಬ್ಬಲಗೆರೆ ಅವರು ಪ್ರಜಾವಾಣಿ ಪತ್ರಿಕೆಯಲ್ಲಿ ಕೀಟ ಪ್ರಪಂಚ ಅಂಕಣಕ್ಕೆ ಬರೆದ 100 ಅಂಕಣಗಳ “ವಿಸ್ಮಯ ಕೀಟ ಪ್ರಪಂಚ-1” ಕೃತಿಯನ್ನು ಸಾರ್ವಜನಿಕ ಗ್ರಂಥಾಲಯಗಳ ನಿರ್ದೇಶಕ ಡಾ. ಸತೀಶ್ ಕುಮಾರ್ ಹೊಸಮನಿ ಲೋಕಾರ್ಪಣೆ ಮಾಡಿದರು.

 ವೇದಿಕೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ ಅಶೋಕ್ ನರೋಡೆ, ಜನಪದ ಗಾಯಕ ಗೋ.ನಾ. ಸ್ವಾಮಿ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್, ಬಿ.ಬಿ.ಎಂ.ಪಿ. ಅಧಿಕಾರಿ ಮುರಳಿಧರ್ ಕೆ., ನಿವೃತ್ತ ಪೋಲೀಸ್ ಅಧಿಕಾರಿ ಶಂಕರ್ ಬಿದರಿ, ಹೃದಯವಾಹಿನಿ – ಕರ್ನಾಟಕ ಅಧ್ಯಕ್ಷ . ಕೆ.ಪಿ. ಮಂಜುನಾಥ್ ಸಾಗರ್, ಲೇಖಕ ಡಾ ನೂರ್ ಸಮದ್ ಅಬ್ಬಲಗೆರೆ,   ಬಿ.ಬಿ.ಎಂ.ಪಿ. ವೈದ್ಯಾಧಿಕಾರಿ ಸವಿತಾ ಹಾಗೂ‌ ಮತ್ತಿತರರು ಉಪಸ್ಥಿತರಿದ್ದರು.



Join Whatsapp