ಮುಂಬೈ: ಮಹಾರಾಷ್ಟ್ರ ಸರ್ಕಾರದ ಶೇಕಡಾ 75 ರಷ್ಟು ಸಚಿವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ನಡೆಸಿದ ಸಮೀಕ್ಷೆಯಿಂದ ಬಹಿರಂಗವಾಗಿದೆ.
ಆಗಸ್ಟ್ 9 ರಂದು 18 ಸದಸ್ಯರ ಸೇರ್ಪಡೆಯೊಂದಿಗೆ ತನ್ನ ಸಚಿವ ಸಂಪುಟವನ್ನು ವಿಸ್ತರಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂಧೆ ಅವರ ಸರ್ಕಾರ 20 ಸಚಿವರನ್ನು ಹೊಂದಿದೆ.
2019 ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಮಂತ್ರಿಗಳು ಸಲ್ಲಿಸಿದ ಅಫಿದವಿತ್ ಗಳನ್ನು ಸಚಿವ ಸಂಪುಟವನ್ನು ವಿಸ್ತರಿಸಿದ ಬಳಿಕ ADR ಮತ್ತು ಮಹಾರಾಷ್ಟ್ರ ಎಲೆಕ್ಷನ್ ವಾಚ್ ಸಂಸ್ಥೆ ಅಧ್ಯಯನ ನಡೆಸಿತ್ತು. ಇದರಲ್ಲಿ 15 ಸಚಿವರು ಅಂದರೆ ಶೇಕಡಾ 75 ರಷ್ಟು ಸಚಿವರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಘೋಷಿಸಿದ್ದಾರೆ ಮತ್ತು 13 ಮಂದಿ ಅಂದರೆ ಶೇಕಡಾ 65 ರಷ್ಟು ಸಚಿವರು ತಮ್ಮ ವಿರುದ್ಧ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ ಎಂದು ಹೇಳಲಾಗಿದೆ.