ಹಾಸನ: ಪೆನ್‌ಡ್ರೈವ್ ಇದೆ, ವೀಡಿಯೊ ಇದೆ ಎಂದು ಜನರನ್ನು ಬಂಧಿಸಲು ಹೊರಟರೆ ಹಾಸನ ಜಿಲ್ಲೆಯಲ್ಲಿಯೇ 15 ಲಕ್ಷ ಜನರ ಮೇಲೂ ಕೇಸ್ ಹಾಕಿ, ಬಂಧಿಸಬೇಕಾಗುತ್ತದೆ ಎಂದು ಮಾಜಿ ಶಾಸಕ ಬಿಜೆಪಿಯ ಪ್ರೀತಂಗೌಡ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ವೀಡಿಯೊಗಳನ್ನು ಯಾರೊಬ್ಬರೂ ಬೇಕೆಂದು ಕೇಳಿ ತರಿಸಿಕೊಳ್ಳುವುದಿಲ್ಲ. ಯಾವುದೋ ಗ್ರೂಪ್‌ಗೆ ಯಾರೋ ಫಾರ್ವರ್ಡ್ ಮಾಡಿರುತ್ತಾರೆ. ಅದು ಮೊಬೈಲ್‌ನಲ್ಲಿ ಸೇವ್ ಆಗಿರುತ್ತದೆ. ಹಾಗಂತ ಎಲ್ಲರನ್ನು ಕರೆದುಕೊಂಡು ಹೋಗಿ ಬಂಧಿಸಲು ಆಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಜಿಲ್ಲೆಯಲ್ಲಿ ವೀಡಿಯೊ ವ್ಯಾಪಕವಾಗಿ ಹರಡಿದ್ದು ನಿಜ. ಆದರೆ ನಮ್ಮ ಕಾರ್ಯಕರ್ತರಿಗೆ ಅಶ್ಲೀಲ ವೀಡಿಯೊಗಳನ್ನು ಹಂಚಿಕೊಳ್ಳಬಾರದು ಎಂದು ಕಟ್ಟುನಿಟ್ಟಾದ ಸೂಚನೆ ನೀಡಿದ್ದೇನೆ ಎಂದು ಪ್ರೀತಂ ಗೌಡ ಹೇಳಿದ್ದಾರೆ.