ಕೆನಡಾದಲ್ಲಿ ಭೀಕರ ಅಪಘಾತ : ಕ್ಯಾಸಿನೊ ಜೂಜಿಗೆ ತೆರಳುತ್ತಿದ್ದ 15 ವೃದ್ಧರ ಸಾವು

Prasthutha|

ಕೆನಡಾ: ಇಲ್ಲಿನ ಪ್ರೈರೀ ಪ್ರಾಂತ್ಯದ ಮ್ಯಾನಿಟೋಬಾದಲ್ಲಿ ಕ್ಯಾಸಿನೊಗೆ ತೆರಳುತ್ತಿದ್ದ ಹಿರಿಯ ನಾಗರಿಕರ ಮೇಲೆ ಟ್ರಕ್ ಹರಿದು, ಭಾರೀ ಅನಾಹುತ ಸಂಭವಿಸಿದೆ. ಕನಿಷ್ಠ 15 ಮಂದಿ ವೃದ್ಧರು ಸಾವನ್ನಪ್ಪಿದ್ದಾರೆ.

- Advertisement -

ಗುರುವಾರ ಅವರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಸೆಮಿ ಟ್ರೈಲರ್ ಟ್ರಕ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಕೆನಡಾದಲ್ಲಿ ಟ್ರಕ್ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಕನಿಷ್ಠ 15 ವೃದ್ಧರು ಸಾವನ್ನಪ್ಪಿದ್ದಾರೆ, ವಿನ್ನಿಪೆಗ್‌ನ ಪಶ್ಚಿಮಕ್ಕೆ 170 ಕಿಮೀ (105 ಮೈಲುಗಳು) ನೈಋತ್ಯ ಮ್ಯಾನಿಟೋಬಾದ ಕಾರ್ಬೆರಿ ಪಟ್ಟಣದ ಬಳಿ ಅಪಘಾತ ಸಂಭವಿಸಿದೆ.

- Advertisement -

ಸಾವಿನ ಸಂಖ್ಯೆ ದೃಢಪಟ್ಟರೆ, ಇತ್ತೀಚಿನ ಕೆನಡಾದ ಇತಿಹಾಸದಲ್ಲಿ ಅಪಘಾತವು ಅತ್ಯಂತ ಭೀಕರ ರಸ್ತೆ ಅಪಘಾತಗಳಲ್ಲಿ ಒಂದಾಗಲಿದೆ.

Join Whatsapp