15 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು

Prasthutha|

ಬೆಳಗಾವಿ: ಹದಿನೈದು ಅಡಿ ಆಳದ ಕೊಳವೆ ಬಾವಿಗೆ ಮಗುವೊಂದು ಬಿದ್ದಿರುವ ಘಟನೆ ಬೆಳಗಾವಿಯ ರಾಯಬಾಗ ತಾಲೂಕಿನ ಆಲಕನೂರು ಎಂಬಲ್ಲಿ ನಡೆದಿದೆ.

- Advertisement -

ಎರಡುವರೆ ವರ್ಷದ ಶರತ್ ಎಂಬ ಮಗು ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದು, ಹುಡುಕಾಟ ನಡೆಸಿದಾಗ ತೆರೆದ ಕೊಳವೆ ಬಾವಿಯೊಳಗೆ ಇರುವುದು ಪತ್ತೆಯಾಗಿದೆ.

ಮಗುವನ್ನು ಹೊರ ತೆರೆಯಲು ಜಿಲ್ಲಾಡಳಿತ ಕಾರ್ಯಾಚರಣೆ ಕೈಗೊಂಡಿದೆ.ಮಗು ಬೋರ್ ವೆಲ್ ಗೆ ಬಿದ್ದಿರುವುದು ದೃಢಪಟ್ಟಿದೆ. ಮಗುವನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Join Whatsapp