ಗುಂಡಿನ ದಾಳಿಗೆ 14ರ ಹರೆಯದ ಫೆಲೆಸ್ತೀನ್ ಬಾಲಕ ಬಲಿ | 2022 ರಲ್ಲಿ ಇಸ್ರೇಲ್ ನಿಂದ ಇದುವರೆಗೆ 13 ಮಕ್ಕಳ ಹತ್ಯೆ

Prasthutha: May 28, 2022

ಗಾಝಾ: ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯ ಬೆಥ್ಲೆಹೆಮ್ ಬಳಿ ಇಸ್ರೇಲ್ ಸೈನಿಕರು 14ರ ಹರೆಯದ ಫೆಲೆಸ್ತೀನ್ ಬಾಲಕನನ್ನು ಗುಂಡಿಕ್ಕಿ ಕೊಂದಿದ್ದಾರೆ. ಇದು ಈ ವಾರದಲ್ಲಿ ನಡೆದ ಬಾಲಕರ ಎರಡನೇ ಹತ್ಯೆಯಾಗಿದೆ.

ಮೃತನನ್ನು ಝೈದ್ ಮುಹಮ್ಮದ್ ಸಯೀದ್ ಘೋನಿಮ್ ಎಂದು ಮಾಧ್ಯಮಗಳು ಗುರುತಿಸಿದ್ದು, ಬಾಲಕನ ಕುತ್ತಿಗೆ ಮತ್ತು ಬೆನ್ನಿಗೆ ಗುಂಡು ಹಾರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಘೋನಿಮ್ ಎಂಬ ಬಾಲಕ ಈ ತಿಂಗಳು ಇಸ್ರೇಲ್ ಸೈನಿಕರ ಗುಂಡಿನ ದಾಳಿಗೆ ಬಲಿಯಾದ 5ನೇ ಮತ್ತು 2022 ರಲ್ಲಿ ಬಲಿಯಾದ 13ನೇ ಬಾಲಕನಾಗಿದ್ದಾನೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!