ಹೊಸದಿಲ್ಲಿ: ಗೋಮೂತ್ರದಲ್ಲಿ 14 ವಿಧದ ಹಾನಿಕಾರಕ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಅದು ಸೇವನೆಗೆ ಯೋಗ್ಯವಲ್ಲ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಹಸುಗಳು ಮತ್ತು ಗೂಳಿಗಳ ಮೂತ್ರದ ಮಾದರಿಗಳ ಮೇಲೆ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ(IVRI) ನಡೆಸಿದ ಸಂಶೋಧನೆಯಲ್ಲಿ ಮನುಷ್ಯರ ಹೊಟ್ಟೆಯ ಸೋಂಕಿಗೆ ಕಾರಣವಾಗುವ 14 ವಿಧದ ಹಾನಿಕಾರಕ ಬ್ಯಾಕ್ಟಿರಿಯಾಗಳನ್ನು ಪತ್ತೆಯಾಗಿವೆ.
ಸಂಶೋಧನೆಗೆ ಡೈರಿ ಫಾರ್ಮ್‌ಗಳಿಂದ ಮೂರು ವಿಧದ ಹಸುಗಳಾದ ಥಾರ್ಪಾರ್ಕರ್, ಸಾಹಿವಾಲ್ ಮತ್ತು ವಿಂದಾವಾಣಿ ತಳಿಗಳ ಮೂತ್ರಗಳನ್ನು ಬಳಸಲಾಗಿತ್ತು.