ರಾಕ್ಷಸ ರಷ್ಯಾದ ಅಟ್ಟಹಾಸಕ್ಕೆ 137 ಮಂದಿ ಬಲಿ; 316 ಮಂದಿಗೆ ಗಾಯ

Prasthutha|

ರಷ್ಯಾದಲ್ಲಿಉಕ್ರೇನ್ ಪರ ಬೀದಿಗಿಳಿದ ಪ್ರತಿಭಟನಾಕಾರರ ಬಂಧನ

- Advertisement -

ಮಾಸ್ಕೋ: ಉಕ್ರೇನ್ ಮೇಲೆ ತೀವ್ರಗೊಂಡ ರಷ್ಯಾದ ಆಕ್ರಮಣದಿಂದಾಗಿ 137 ಮಂದಿ ಸಾವನ್ನಪ್ಪಿದ್ದು,316 ಮಂದಿಗೆ ಗಾಯಗಳುಂಟಾಗಿವೆ.

ರಷ್ಯಾದ ವಿರುದ್ಧ ವಿಶ್ವಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು, ಪ್ಯಾರಿಸ್ ಮತ್ತು ನ್ಯೂಯಾರ್ಕ್ ನಲ್ಲಿ ಸಾವಿರಾರು ಜನರು ಯುದ್ಧ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಬೀದಿಗಿಳಿದಿದ್ದಾರೆ.

- Advertisement -

ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಬೃಹತ್ ಯುದ್ಧ ವಿರೋಧಿ ರ್ಯಾ ಲಿ ಯನ್ನು ನಡೆಸಲಾಯಿತು. ರಷ್ಯಾದಲ್ಲಿ ಪ್ರತಿಭಟನೆ ನಡೆಸಲು ಪ್ರಯತ್ನಿಸಿದ 1,700 ಜನರನ್ನು ಪೊಲೀಸರು ಬಂಧಿಸಿದರು. ದೇಶವನ್ನು ಉಳಿಸಲು ರಷ್ಯಾದ ಪಡೆಗಳು ಉಕ್ರೇನ್ ಮೇಲೆ ದಾಳಿ ನಡೆಸಿದವು ಎಂಬ ಪುಟಿನ್ ಅವರ ಹೇಳಿಕೆಯನ್ನು ಮಾಸ್ಕೋದಲ್ಲಿ ನೆರೆದಿದ್ದ ಜನಸಮೂಹವು ತಿರಸ್ಕರಿಸಿತು. ಪ್ರತಿಭಟನಕಾರರು ಉಕ್ರೇನ್ ನ ಜನತೆಯೊಂದಿಗೆ  ಕ್ಷಮೆಯಾಚಿಸಿಸುತ್ತಾಯುದ್ಧ ಹೇರಿದವರೊಂದಿಗೆ ತಾವು ಇಲ್ಲ ಎಂಬ ಘೋಷಣೆಗಳನ್ನು ಕೂಗಿದರು. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಹೊಸ ಹಿಟ್ಲರ್ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಷ್ಯಾದ 53 ನಗರಗಳಲ್ಲಿ ಪೋಲೀಸರು ಬಂಧಿಸಿದ 1902 ಜನರಲ್ಲಿ 940 ಜನರು ಮಾಸ್ಕೋದಿಂದ ಸೆರೆಹಿಡಿಯಲ್ಪಟ್ಟವರಾಗಿದ್ದಾರೆ. ರೋಮ್ ನ ಕೊಲೊಸಿಯಮ್ ಕಳೆದ ರಾತ್ರಿ ಉಕ್ರೇನ್ ಗೆ ಬೆಂಬಲಸೂಚಿಸುತ್ತಾ ಉಕ್ರೇನ್ ನ ಧ್ವಜದ ನೀಲಿ ಮತ್ತು ಹಳದಿ ಬಣ್ಣದಿಂದ ಕಂಗೊಳಿಸಿತು.

ಈ ಮಧ್ಯೆ  ಜಿ7 ದೇಶಗಳು ರಷ್ಯಾದ ಮಿಲಿಟರಿ ಕ್ರಮವನ್ನು ಖಂಡಿಸಿವೆ. ರಷ್ಯಾದ ಐದು ಬ್ಯಾಂಕುಗಳು ಮತ್ತು ರಷ್ಯಾದ100 ಬಿಲಿಯನೇರ್ ಗಳ ಮೇಲೆ ಬ್ರಿಟನ್ ನಿರ್ಬಂಧಗಳನ್ನು ಹೇರಿತು. ರಷ್ಯಾ ವಿರುದ್ಧ ಆರ್ಥಿಕ ಮತ್ತು ರಾಜತಾಂತ್ರಿಕ ನಿರ್ಬಂಧಗಳಲ್ಲಿ ಇದು ಮೊದಲ ಹೆಜ್ಜೆಯಾಗಿದೆ.

ಮುಂದಿನ ಕೆಲವು ದಿನಗಳಲ್ಲಿ ಹೆಚ್ಚಿನ ಭಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸಂಸತ್ತಿಗೆ ತಿಳಿಸಿದರು. ರಷ್ಯಾದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಎರೋಫ್ಲೋಟ್ ನ ವಿಮಾನಗಳಿಗೆ ಬ್ರಿಟನ್ ನಲ್ಲಿ ಇಳಿಯುವನಿಷೇಧವನ್ನೂ ಹೇರಲಾಗಿದೆ.

Join Whatsapp